ಅಂಕಾರಾ (ಟರ್ಕಿ), 19 ಜುಲೈ (ಹಿ.ಸ.) :
ಆ್ಯಂಕರ್ : ಟರ್ಕಿಯಲ್ಲಿರುವ ಅಮೆರಿಕದ ರಾಯಭಾರಿ ಟಾಮ್ ಬರಾಕ್ ಅವರು ಸಿರಿಯಾ ಮತ್ತು ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಘೋಷಿಸಿದ್ದಾರೆ.
ಈ ಒಪ್ಪಂದಕ್ಕೆ ಟರ್ಕಿ, ಜೋರ್ಡಾನ್ ಹಾಗೂ ಇತರ ನೆರೆಯ ರಾಷ್ಟ್ರಗಳು ಸಹಮತ ಸೂಚಿಸಿವೆ.
ಇಸ್ರೇಲ್, ಬುಧವಾರ ಸಿರಿಯಾದ ಡಮಾಸ್ಕಸ್ ಮೇಲೆ ವಾಯು ದಾಳಿ ನಡೆಸಿದ್ದು, ಮೂರು ಮಂದಿ ಮೃತಪಟ್ಟಿದ್ದರು.
ಸಿರಿಯನ್ ಅಧ್ಯಕ್ಷ ಅಹ್ಮದ್ ಅಲ್-ಶರಾ ಸೈನ್ಯ ಹಿಮ್ಮೆಟ್ಟಿಸುತ್ತಿರುವುದಾಗಿ ತಿಳಿಸಿದ್ದಾರೆ. ಡ್ರೂಜ್ ಸಮುದಾಯದೊಂದಿಗೆ ಕದನ ವಿರಾಮ ಕೂಡ ಘೋಷಿಸಲಾಗಿದೆ.
ಅಮೆರಿಕ ಮತ್ತು ಟರ್ಕಿ ಈ ಬೆಳವಣಿಗೆಯ ಬಗ್ಗೆ ದೂರವಾಣಿ ಚರ್ಚೆ ನಡೆಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa