ಭಾರತ ಸಂವಿಧಾನವನ್ನು ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೇರೆಗೆ ರಚಿಸಲಾಗಿದೆ; ನ್ಯಾಯಮೂರ್ತಿ ನಾಗಮೋಹನ್‌ದಾಸ್
ಭಾರತ ಸಂವಿಧಾನವನ್ನು ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೇರೆಗೆ ರಚಿಸಲಾಗಿದೆ; ನ್ಯಾಯಮೂರ್ತಿ ನಾಗಮೋಹನ್‌ದಾಸ್
ಚಿತ್ರ: ಕೋಲಾರದಲ್ಲಿ ಶನಿವಾರ ನಡೆದ ಸಂವಿಧಾನ ಓದು ಅಭಿಯಾನದಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಸಂವಿಧಾನದ ಆಶಯಗಳ ಬಗ್ಗೆ ಮಾತನಾಡಿದರು.


ಕೋಲಾರ, ೧೯ ಜುಲೈ (ಹಿ.ಸ.) :

ಆ್ಯಂಕರ್ : ಭಾರತದ ಸಂವಿಧಾನವನ್ನು ಮಹಾನ್ ದಾರ್ಶನಿಕರ ಸಂದೇಶಗಳ ಮೇಲೆ ರಚಿಸಲಾಗಿದೆ. ಬುದ್ದನ ಕಾರುಣ್ಯ, ಬಸವಣ್ಣನವರ ಸಮಾನತೆ ,ಗಾಂಧಿಜಿಯವರ ಅಹಿಂಸೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಮೇರೆಗೆ ರಚಿಸಲಾಗಿದೆ. ಸಂವಿಧಾನದಲ್ಲಿ ಬಹುತ್ವದ ಆಶಯವನ್ನು ನೋಡ ಬಹುದಾಗಿದೆ. ಭಾರದ ಸಂವಿzಧಾನ ಜಾರಿಗೆ ಬಂದು ಎಪ್ಪತ್ತಾರು ವರ್ಷಗಳಾಗಿವೆ.ಸಂವಿಧಾನವನ್ನು ಅರ್ಥ ಮಾಡಿಕೊಳ್ಳ ಬೇಕಾದರೆ ಈ ದೇಶದ ಜನರ ಸಂಸ್ಕೃತಿ ಆಚಾರ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕೆಂದು ನಿವೃತ್ತ ಹೈಕೋರ್ಟ್ ನಾಯಮೂರ್ತಿ ನಾಗಮೋಹನ್‌ದಾಸ್ ಅಭಿಪ್ರಾಯಪಟ್ಟರು.

ಕೋಲಾರದಲ್ಲಿ ಶನಿವಾರ ನಡೆದ ಸಂವಿಧಾನ ಓದು ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. ಭಾರತ ವೈವಿದ್ಯತೆಯಲ್ಲಿ ಏಕತೆಯನ್ನು ಹೊಂದಿದೆ. ಹಲವಾರು ಭಾಷೆಗಳನ್ನು ಇಲ್ಲಿನ ಜನರು ಮಾತನಾಡುತ್ತಾರೆ.ವಿವಿದ ಧರ್ಮ ಆಚಾರ ವಿಚಾರಗಳನ್ನು ಪಾಲಿಸುತ್ತಾರೆ. ಎಲ್ಲರು ಬಹುತ್ವದ ಆದಾರದ ಮೇಲೆ ಬದುಕಲು ಸಂವಿಧಾನ ಕಾರಣವಾಗಿದೆ. ಸಾವಿರಾರು ಜಾತಿಗಳು ಮತ್ತು ಉಪ ಜಾತಿಗಳಿವೆ. ಬಹು ಸಂಸ್ಕೃತಿಯನ್ನು ಸಂವಿಧಾನ ರಕ್ಷಿಸಿದೆ.ಸಂವಿಧಾನ ರಚನೆಯಲ್ಲಿ ಹಲವು ಮಹನೀಯರ ಕೊಡುಗೆ. ಅವರನ್ನು ನಾವು ಇಂದು ಸ್ಮರಿಸಬೇಕಾಗಿದೆ ಎಂದರು.

ಎಲ್ಲರು ಘನತೆ ಗೌರವದಿಂದ ಬದುಕಲು ಸಮಾನವಾದ ಅವಕಾಶಗಳನ್ನು ಸಂವಿಧಾನ ಕಲ್ಪಿಸಿದೆ. ದೇಶ ಎಂದರೆ ಕೇವಲ ಮಣ್ಣು ಅಲ್ಲ.ದೇಶದ ಚರಿತ್ರೆ ದೇಶದ ಜನರನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಆಗ ಮಾತ್ರ ಸಂವಿಧಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಸ್ವಾತಂತ್ರಪೂರ್ವದಲ್ಲಿ ಈ ದೇಶವನ್ನು ಹಲವರು ಆಳಿದ್ದಾರೆ. ಹೊರ ದೇಶಗಳಿಂದ ಬಂದವರು ನಮ್ಮನ್ನು ಆಳಿದ್ದಾರೆ. ಈ ದೇಶದ ಸಂಪತ್ತನ್ನು ಕೊಳ್ಳೆ ಹೊಡಿದ್ದಾರೆ. ಬಂದವರು ಇಲ್ಲೇ ನೆಲೆಸಿದರು. ಅವರು ತಮ್ಮ ಆಚಾರ ವಿಚಾರಗಳನ್ನು ಜನರ ಮೇಲೆ ಹೇರಿದ್ದಾರೆ. ಅವರೆಲ್ಲ ಬೇರೆ ಬೇರೆ ಧರ್ಮ ಮತ್ತು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಬಂದವರು ಇಲ್ಲೇ ನೆಲೆಸಿದರು. ಆದರೆ ಎಲ್ಲರನ್ನು ಸಂವಿಧಾನ ರಕ್ಷಿಸಿದೆ ಎಂದು ತಿಳಿಸಿದರು.

ಡಾ.ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿನ ರಚನಾ ಸಮಿತಿಯನ್ನು ರಚಿಸಲಾಗಿತ್ತು. ವಿವಿದ ಉಪ ಸಮಿತಿಗಳನ್ನು ಸಹ ರಚಿಸಲಾಗಿತ್ತು. ಡಾ.ಬಿ. ಆರ್. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿನ ಕರಡು ರಚನಾ ಸಮಿತಿಯನ್ನು ರಚಿಸಲಾಗಿತ್ತು. ಹಲವು ವರ್ಷಗಳ ಅವಿರತ ಶ್ರಮದಿಂದಾಗಿ ಸಂವಿಧಾನದ ಕರಡನ್ನು ಒಪ್ಪಿ ಜಾರಿಗೆ ತರಲಾಯಿತು. ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಕಾರಣಕ್ಖಾಗಿ ಒಂದು ಸಣ್ಣ ಗುಂಪು ಹಿಂದು ರಾಷ್ಟೃವಾಗ ಬೇಕೆಂದು ಪ್ರತಿಪಾದಿಸಿತ್ತು. ಆದರೆ ಸಂವಿಧಾನ ಅದಕ್ಕೆ ಅವಕಾಶ ನೀಡಲಿಲ್ಲ. ಜಾತ್ಯಾತೀತ ರಾಷ್ಟ್ರದ ಪರಿಕಲ್ಪನೆಯ ಮೇಲೆ ದೇಶವನ್ನು ಕಟ್ಟಲಾಗಿದೆ. ಎಲ್ಲ ಜನರನ್ನು ಸಂವಿಧಾನ ಒಗ್ಗೂಡಿಸಿದೆ ಎಂದು ಸಂವಿಧಾನದ ಆಶಯಗಳನ್ನು ವಿವರಿಸಿದರು.

ಸಂವಿಧಾನ ಜಾರಿಗೆ ಬಂದು ಎಪ್ಪತ್ತಾರು ವರ್ಷಗಳಾದರು ಸಹ ನಾವು ಸಂವಿಧಾನವನ್ನು ಅರ್ಥಮಾಡಿಕೊಂಡಿಲ್ಲ ಹಾಗು ಓದಿಲ್ಲ. ಸರ್ಕಾರ ಸಹ ಸಂವಿಧಾನವನ್ನು ಓದಿಸಿಲ್ಲ. ಸಂವಿಧಾನವನ್ನು ಎಲ್ಲರು ಓದಿದಾಗ ಮಾತ್ರ ಜಾತ್ಯಾತೀತ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಯುವಕರು ಕೋಮುವಾದ, ಭಯೋತ್ಪಾದನೆ ಮತಾಂಧತೆ ವಿರುಧ್ದ ಹೋರಾಟ ನಡೆಸ ಬೇಕು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ನಾಗಮೋಹನ್‌ದಾಸ್ ಕರೆ ನೀಡಿದರು.

ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್ .ರವಿ ಮಾತನಾಡಿ ಸಂವಿಧಾನ ಓದು ಅಭಿಯಾನ ಇಡೀ ರಾಜ್ಯದ ಜನರ ಮೇಲೆ ಪರಿಣಾಮ ಬೀರಿದೆ. ನ್ಯಾಯಮೂರ್ತಿ ನಾಗಮೋಹನ್‌ದಾಸ್ ರಚಿಸಿರುವ ಸಂವಿಧಾನ ಓದು ಕೃತಿ ಬಹಳ ಅರ್ಥಪೂರ್ಣವಾಗಿದೆ. ಸಂವಿಧಾನ ಎಲ್ಲರನ್ನು ಪ್ರೀತಿ ಮತ್ತು ಸಮಾನತೆಯಿಂದ ಕಾಣುತ್ತದೆ. ಬಸವಾದಿ ಶರಣರು ಹನ್ನರಡನೇ ಶತಮಾನದಲ್ಲೇ ಸಮಾನತೆಯ ಸಂದೇಶವನ್ನು ಸಾರಿದ್ದರು. ಆದರೆ ಇಂದಿಗೂ ಎಲ್ಲರನ್ನು ಸಮಾನವಾಗಿ ಕಾಣುವ ಸಹಿಸ್ಣುತೆ ಇಲ್ಲವಾಗಿದೆ. ಸಂವಿಧಾನವನ್ನು ಯಾರೋ ಒಬ್ಬರು ಬರೆದ ಪುಸ್ತಕ ಅಲ್ಲ. ನಾವೇ ರಚಿಸಿಕೊಂಡ ಕೃತಿ ಆಗಿದೆ. ಎಲ್ಲರು ಒಪ್ಪಿ ಅನುಷ್ಠಾನ ಮಾಡಲಾಗಿದೆ. ಈಗಲೂ ಸಮಾಜದಲ್ಲಿ ಅಸಮಾನತೆ ಮತ್ತು ದೌರ್ಜನ್ಯಗಳು ಮುಂದುವರೆದಿವೆ ಎಂದು ವಿಷಾಧಿಸಿದರು.

ಸಮಾಜದ ಒಪ್ಪು ತಪ್ಪುಗಳನ್ನು ತಿದ್ದಲು ಸಂವಿಧಾನದಲ್ಲಿ ಅವಕಾಶವಿದೆ. ಈ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಿನ್ನೆ ಮೊನ್ನೆ ಈ ದೇಶವನ್ನು ಕಟ್ಟಿಲ್ಲ. ಸಂವಿಧಾನದಲ್ಲಿ ಏನಾದರು ವೈಫಲ್ಯ ಆದರೆ ಅದಕ್ಕೆ ನಾವೆಲ್ಲ ಜವಾಬ್ದಾರಿ ಆಗುತ್ತೇವೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಎರಡು ಸಾವಿರ ವರ್ಷಗಳ ಹಿಂದೆಯೇ ನಾವು ಹೇಗಿರಬೇಕೆಂದು ಬುದ್ಧ ಸಂದೇಶವನ್ನು ಸಾರಿದ್ದರು. ಸಮಾಜ ಹೇಗಿರಬೇಕು ಯಾವ ದಾರಿಯಲ್ಲಿ ಸಾಗಬೇಕು ಎಂಬುದನ್ನು ಹೇಳಿದ್ದಾರೆ. ಆದರೆ ಇಂದಿಗೂ ಬುದ್ದನ ಸಂದೇಶಗಳು ಪ್ರಸ್ತುತವಾಗಿವೆ. ಕೊಳಗೇರಿಗಳಿಗಿಂತ ಮಾನಸಿಕ ಕೊಳಗೇರಿ ತೀರ ಅಪಾಯಕಾರಿಯಾಗಿದೆ. ನಮ್ಮ ನಡುವೆ ತಾರತಮ್ಯವಿದೆ.ಅಸಮಾನತೆ ಇದೆ. ನಾವೇ ಕಂದರಗಳನ್ನು ಸೃಷ್ಢಿ ಮಾಡಿಕೊಂಡಿದ್ದೇವೆ. ಕೆಟ್ಟ ಮನಸ್ಥಿತಿಯಿಂದ ಹೊರಬರಲು ಇಂತಹ ಅಧ್ಯಯನ ಶಿಬಿರಗಳು ಪೂರಕವಾಗುತ್ತವೆ ಎಂದು ಅಭಿಪ್ರಾಯಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀಣ್ ಬಾಗೇವಾಡಿ, ಎಸ್ಪಿ ನಿಖಿಲ್.ಬಿ., ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಟೇಶ್, ಅರಿವು ಶಿವಪ್ಪ, ವಕೀಲ ಮಟ್ನಹಳ್ಳಿ ಸತೀಶ್ ಮುಂತಾದವರು ಭಾಗಿಯಾಗಿದ್ದರು.

ಚಿತ್ರ: ಕೋಲಾರದಲ್ಲಿ ಶನಿವಾರ ನಡೆದ ಸಂವಿಧಾನ ಓದು ಅಭಿಯಾನದಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಸಂವಿಧಾನದ ಆಶಯಗಳ ಬಗ್ಗೆ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande