ವಿಜಯಪುರ, 19 ಜುಲೈ (ಹಿ.ಸ.) :
ಆ್ಯಂಕರ್ : ಕಳೆದ ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ಡ್ರಾನೇಜ್ ನೀರು ರಸ್ತೆಗೆ ಬಂದಿದೆ. ಇದರಿಂದ ಜನಜೀವನ ಅಸ್ತವ್ಯಸ್ಥ ಆಗಿರುವ ಘಟನೆ ವಿಜಯಪುರ ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ.
ಹಲವು ವರ್ಷಗಳಿಂದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಡ್ರಾನೇಜ್ ಸರಿಪಡಿಸುವಂತೆ ಮನವಿ ಮಾಡಿದ್ರೂ ಕ್ಯಾರೆ ಅಂತಿಲ್ಲ. ಅಲ್ಲದೇ, ಶಾಲಾ ಮಕ್ಕಳು, ನೌಕರರಿಗೆ ಈ ರಸ್ತೆಯಲ್ಲಿ ಓಡಾಟ ನಡೆಸಲು ಸಮಸ್ಯೆ ಆಗುತ್ತಿದೆ. ಇನ್ನು ಮಕ್ಕಳಿಗೆ ರೋಗಗಳು ಅಂಟಿಕೊಳ್ಳುವ ಭೀತಿ ಇದೆ ಎಂದು ಸ್ಥಳೀಯಾರಾದ ಅಶೋಕ ಕಾಂಬ್ಳೆ ಕಿಡಿಕಾರಿದ್ದಾರೆ.
ಆದಷ್ಟು ಬೇಗನೆ ಡ್ರಾನೇಜ್ ನೀರು ರಸ್ತೆಗೆ ಬರದಂತೆ ವ್ಯವಸ್ಥೆ ಮಾಡಬೇಕು ಎಂದು ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande