ಹಾಸನ, 19 ಜುಲೈ (ಹಿ.ಸ.) :
ಆ್ಯಂಕರ್ : ಹಾಸನ ಜಿಲ್ಲಾಧಿಕಾರಿ ಡಾ. ಲತಾ ಕುಮಾರಿ ಪೌತಿ ಖಾತೆ ಜೊತೆಗೆ ಪಿಂಚಣಿ ಆಂದೋಲನವನ್ನು ನಡೆಸಿ, ಕೈಬಿಟ್ಟುಹೋಗಿರುವ ಅರ್ಹ ಕುಟುಂಬಗಳಿಗೆ ಸರಕಾರದ ಯೋಜನೆಗಳ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಕೆರೆ, ಗೋಮಾಳ ಹಾಗೂ ಸ್ಮಶಾನದ ಒತ್ತುವರಿಗಳನ್ನು ತೆರವುಗೊಳಿಸಲು, ಬಸ್ ಸೇವೆ, ಕೊಳವೆಬಾವಿ ದುರಸ್ತಿ ಅರ್ಜಿಗಳು, ಪಡಿತರ ವಿತರಣೆ, ಮಕ್ಕಳ ಶಾಲಾ ಕಟ್ಟಡದ ಸುರಕ್ಷತೆ, ಮತ್ತು ವಿದ್ಯುತ್ ತಂತಿ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
140 ಜನಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು. ಪ್ರತಿ ಮಾಹೆಯ ಮೊದಲ ಶನಿವಾರ ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಸೂಚಿಸಿದರು. ಸಾರ್ವಜನಿಕ ದೂರುಗಳಿಗೆ ತ್ವರಿತ ಸ್ಪಂದನೆ, ಮನೆಮಾತಾಗಬೇಕು ಎಂದು ಅಧಿಕಾರಿಗಳಿಂದ ನಿರೀಕ್ಷೆ ವ್ಯಕ್ತಪಡಿಸಿದರು.
ಜಿಪಂ ಸಿಇಒ ಬಿಆರ್ ಪೂರ್ಣಿಮಾ, ಎಎಸ್‌ಪಿ ತಮ್ಮಯ್ಯ, ಉಪ ವಿಭಾಗಾಧಿಕಾರಿಗಳಾದ ಶೃತಿ, ಮಾರುತಿ ಮತ್ತು ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa