ಹುಬ್ಬಳ್ಳಿ, 19 ಜುಲೈ (ಹಿ.ಸ.) :
ಆ್ಯಂಕರ್ : ದಿನನಿತ್ಯದ ಉಪಹಾರ ತಿನಿಸುಗಳಲ್ಲಿ ದೋಸೆ ಪ್ರಮುಖವಾದದು. ಇದಕ್ಕೆ ರುಚಿ ಹೆಚ್ಚಿಸುವ ಹಲವಾರು ಚಟ್ನಿಗಳಲ್ಲಿ ಉಪ್ಪಿನಕಾಯಿ ಚಟ್ನಿ ವಿಶಿಷ್ಟ ಸ್ಥಾನ ಹೊಂದಿದೆ.
ಈ ಚಟ್ನಿ ತಯಾರಿಕೆಯಲ್ಲಿ ತೆಂಗಿನಕಾಯಿ ತುರಿ, ಮಾವಿನಕಾಯಿ ಉಪ್ಪಿನಕಾಯಿಯ 3–4 ಹೋಳುಗಳು, ಸ್ವಲ್ಪ ಬೆಲ್ಲ, ಉಪ್ಪು ಹಾಗೂ ಹುರಿಗಡಲೆಗಳನ್ನು ನೀರಿನಲ್ಲಿ ರುಬ್ಬಲಾಗುತ್ತದೆ. ನಂತರ ಇದಕ್ಕೆ ಸಾಸಿವೆ, ಇಂಗು, ಕರಿಬೇವು ಸೇರಿಸಿ ಒಗ್ಗರಣೆ ಹಾಕಲಾಗುತ್ತದೆ.
ಮಾವಿನ ಮಿಡಿ ಉಪ್ಪಿನಕಾಯಿ ಬಳಸಿದರೆ ಚಟ್ನಿಯ ರುಚಿ ಇನ್ನೂ ಉತ್ತಮವಾಗುತ್ತದೆ. ಈ ಚಟ್ನಿ ದೋಸೆ, ಇಡ್ಲಿ, ಅಕ್ಕಿ ರೊಟ್ಟಿ ಮತ್ತು ಅನ್ನದ ಜೊತೆಗೆ ಸಹ ಸೂಕ್ತವಾಗಿದ್ದು, ಮನೆಮನೆಗಳಲ್ಲಿ ಪ್ರಸಿದ್ಧವಾಗುತ್ತಿರುವ ಪರಂಪರೆಯ ಪಾಕವಿಧಾನವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa