ಗೋನಾಳ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರ ಆಯ್ಕೆ
ಗದಗ, 19 ಜುಲೈ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಗೋನಾಳ ಗ್ರಾ.ಪಂ ಹೊಸಗೌಡರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳೂ ಆದ ತಾ.ಪಂ ಇಓ ಕೃಷ್ಣಪ್ಪ ಧರ್ಮರ ಹೇಳಿದರು. ಇತ್ತೀಚೆಗೆ ಅಧ್ಯಕ್ಷ ಅಣ್ಣಪ್ಪ ರಾಮಗೇರಿಯವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ಘ
ಪೋಟೋ


ಗದಗ, 19 ಜುಲೈ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಗೋನಾಳ ಗ್ರಾ.ಪಂ ಹೊಸಗೌಡರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳೂ ಆದ ತಾ.ಪಂ ಇಓ ಕೃಷ್ಣಪ್ಪ ಧರ್ಮರ ಹೇಳಿದರು.

ಇತ್ತೀಚೆಗೆ ಅಧ್ಯಕ್ಷ ಅಣ್ಣಪ್ಪ ರಾಮಗೇರಿಯವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ಘೋಷಣೆಯಾಗಿತ್ತು. ಗೋವನಾಳ ಗ್ರಾ.ಪಂ 8 ಜನ ಸದಸ್ಯ ಬಲ ಹೊಂದಿದ್ದು, ಗುರುವಾರ ಎರಡನೆಯ ಅವಧಿಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕರಿಯಪ್ಪಗೌಡ ಹೊಸಗೌಡರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಜರುಗಿತು. ಎಂಟು ಜನ ಸದಸ್ಯರಲ್ಲಿ ಎರಡು ಜನ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿರಲಿಲ್ಲ. 6 ಜನರು ಹಾಜರಿದ್ದ ಹಿನ್ನೆಲೆಯಲ್ಲಿ ಚುನಾವಣೆ ನಡೆಸಿ ಫಲಿತಾಂಶ ಘೋಷಿಸಲಾಗಿದೆ ಎಂದು ತಾ.ಪಂ ಇಓ ಕೃಷ್ಣಪ್ಪ ಧರ್ಮರ ಹೇಳಿದರು.

ನೂತನ ಅಧ್ಯಕ್ಷ ಕರಿಯಪ್ಪಗೌಡ ಹೊಸಗೌಡ್ರ ಎಲ್ಲ ಸದಸ್ಯರು ನೀಡಿದ ಅವಕಾಶಕ್ಕೆ ಧನ್ಯವಾದಗಳನ್ನು ಅರ್ಪಿಸಿ, ಪಂಚಾಯಿತಿಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಅಣ್ಣಪ್ಪ ರಾಮಗೇರಿ, ಉಪಾಧ್ಯಕ್ಷೆ ನಿರ್ಮಲಾ ತಳವಾರ, ಸದಸ್ಯರಾದ ಮಂಜನಗೌಡ ಕೆಂಚನಗೌಡ್ರ, ಸುಶೀಲವ್ವ ಮರಲಿಂಗನಗೌಡ್ರ, ಸುಧಾ ಮಾದರ, ಪ್ರಮುಖರಾದ ಭರಮಣ್ಣ ರೊಟ್ಟಿಗವಾಡ, ನಿಂಗನಗೌಡ್ರು ಹೊಸಗೌಡರ, ನೀಲಪ್ಪಗೌಡ ದುರಗನಗೌಡರ, ಗಂಗಾಧರ ಮಾದರ, ಚಂದ್ರಶೇಖರ ತಳವಾರ, ನಾಗರಾಜ ದೊಡ್ಡಮನಿ, ನೀಲಪ್ಪ ತಿಮ್ಮಾಪೂರ, ಬಸನಗೌಡ ಹೊಸಗೌಡ್ರ, ಹನುಮಂತಗೌಡ ರಾಯನಗೌಡರ, ನಿಂಗಪ್ಪ ಶಿವಬಸಣ್ಣವರ, ಜಗದೀಶ ಕುರುಬರು, ಶಿವರಾಜ್ ಸೊರಟೂರ, ಹನುಮಂತ ಮರಲಿಂಗನಗೌಡ್ರ, ಮೌನೇಶ ಪಶುಪತಿಹಾಳ ಇದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande