ಮಂಗಲ್ ಪಾಂಡೆ ಜನ್ಮ ವಾರ್ಷಿಕೋತ್ಸವ : ಗಣ್ಯರಿಂದ ಗೌರವ
ನವದೆಹಲಿ, 19 ಜುಲೈ (ಹಿ.ಸ.) : ಆ್ಯಂಕರ್ : 1857ರ ಪ್ರಥಮ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕ ಮಂಗಲ್ ಪಾಂಡೆ ಅವರ ಜನ್ಮ ವಾರ್ಷಿಕೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು, ನಾಯಕರು ಸಾಮಾಜಿಕ ಮಾಧ್ಯಮಗಳ ಮೂಲಕ ಗೌರವ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಸಂದೇಶದಲ್ಲಿ,
Mangal pande


ನವದೆಹಲಿ, 19 ಜುಲೈ (ಹಿ.ಸ.) :

ಆ್ಯಂಕರ್ : 1857ರ ಪ್ರಥಮ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕ ಮಂಗಲ್ ಪಾಂಡೆ ಅವರ ಜನ್ಮ ವಾರ್ಷಿಕೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು, ನಾಯಕರು ಸಾಮಾಜಿಕ ಮಾಧ್ಯಮಗಳ ಮೂಲಕ ಗೌರವ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ಅವರು ತಮ್ಮ ಸಂದೇಶದಲ್ಲಿ, ಮಂಗಲ್ ಪಾಂಡೆ ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಚಿಹ್ನೆ. ಅವರ ಧೈರ್ಯ ಮತ್ತು ತ್ಯಾಗ ರಾಷ್ಟ್ರದ ಜನತೆಗೆ ಸದಾ ಸ್ಫೂರ್ತಿಯ ಮೂಲವಾಗಿರುತ್ತದೆ, ಎಂದಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರು, “1857ರ ಕಿಡಿಯನ್ನು ಜ್ವಾಲೆಯಾಗಿ ಮಾರ್ಪಡಿಸಿದ ಸಾಹಸಿ ಯೋಧ ಮಂಗಲ್ ಪಾಂಡೆ ಅವರ ತ್ಯಾಗ ದೇಶದ ಪ್ರತಿ ಯುವಕನಿಗೆ ಪ್ರೇರಣೆಯಾಗಿದೆ,” ಎಂದಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ , “ಮಂಗಲ್ ಪಾಂಡೆ ಬ್ರಿಟಿಷ್ ಆಳ್ವಿಕೆಗೆ ವಿರುದ್ಧ ಹೋರಾಟದ ಕಹಳೆ ಊದಿದ ಧೈರ್ಯಶಾಲಿ ನಾಯಕ,” ಎಂದು ತಿಳಿಸಿದ್ದಾರೆ.

ಸಚಿವರು ನಿತಿನ್ ಗಡ್ಕರಿ, ಸರ್ಬಾನಂದ ಸೋನೋವಾಲ್ ಮತ್ತು ಹರ್ಷ ಮಲ್ಹೋತ್ರಾ ಸಹ ಈ ಮಹಾನ್ ಯೋಧನಿಗೆ ಗೌರವ ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande