ವಿಜಯಪುರ, 19 ಜುಲೈ (ಹಿ.ಸ.) :
ಆ್ಯಂಕರ್ : 20 ಸಾವಿರ ಹಣಕ್ಕಾಗಿ ಓರ್ವನಿಗೆ ಸರಪಳಿಯಂದ ಕಟ್ಟಿ ಹಾಕಿರುವ ಅಮಾನವೀಯ ಘಟನೆ ಭೀಮಾತೀರದಲ್ಲಿ ನಡದಿದೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭಾಷಾಸಾಬ್ ಮುಲ್ಲಾ ಎನ್ನುವನ ಕಾಲಿಗೆ ಸರಪಳಿ ಬಿಗಿದು ಅಮಾನವೀಯ ಕೃತ್ಯ ಎಸೆಯಲಾಗಿದೆ.
ಡ್ರೈವಿಂಗ್ ಕೆಲಸಕ್ಕೆ ಬರುತ್ತೇನೆ ಎಂದು ಭಾಷಾಸಾಬ್ ಮುಲ್ಲಾ 20 ಸಾವಿರ ಸಾಲ ಪಡೆದಿದ್ದ, ಕೆಲಸಕ್ಕೆ ಬಂದಿಲ್ಲ. ಅದಕ್ಕಾಗಿ ಹಣ ವಾಪಸ್ ಕೊಡದೆ ಇರೋದಕ್ಕೆ ಸರಪಳಿಯಿಂದ ಕುಮಾರ ಬಿರಾದಾರ, ಶ್ರೀಶೈಲ ಪಿರಗೊಂಡ ಕಟ್ಟಿ ಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಿ ಚಡಚಣ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande