ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ನೇರ ಸಂದರ್ಶನ
ಗದಗ, 19 ಜುಲೈ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಗದಗ ವತಿಯಿಂದ ನೇರ ಸಂದರ್ಶನವಿದ್ದು ಜುಲೈ 22 ರಂದು ಬೆಳೆಗ್ಗೆ 11 ಗಂಟೆಗೆ ಸಂಸ್ಕೃತಿ ಕನ್ವೇನಷನ್ ಮುಂಡರಗಿ ರಸ್ತೆ ಎಲ್.ಐ.ಸಿ ಕಛೇರಿಯ ಹತ್ತಿರ, ಗದಗ, ಇಲ್ಲಿ ನೇರ ಸಂರ್ದಶನ ಹಮ್ಮಿಕೊಳ್ಳಲಾಗಿದೆ. ಸದರಿ ನೇರ ಸಂರ್ದಶನದಲ್ಲಿ ಸಂ
ಪೋಟೋ


ಗದಗ, 19 ಜುಲೈ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಗದಗ ವತಿಯಿಂದ ನೇರ ಸಂದರ್ಶನವಿದ್ದು ಜುಲೈ 22 ರಂದು ಬೆಳೆಗ್ಗೆ 11 ಗಂಟೆಗೆ ಸಂಸ್ಕೃತಿ ಕನ್ವೇನಷನ್ ಮುಂಡರಗಿ ರಸ್ತೆ ಎಲ್.ಐ.ಸಿ ಕಛೇರಿಯ ಹತ್ತಿರ, ಗದಗ, ಇಲ್ಲಿ ನೇರ ಸಂರ್ದಶನ ಹಮ್ಮಿಕೊಳ್ಳಲಾಗಿದೆ. ಸದರಿ ನೇರ ಸಂರ್ದಶನದಲ್ಲಿ ಸಂಸ್ಕೃತಿ ಕನ್ವೇನಷನ್, ಗದಗ. ಕಂಪನಿ ಭಾಗವಹಿಸಲಿದೆ.

ವಿದ್ಯಾರ್ಹತೆ : ಬಿ.ಸಿ.ಎ, ಬಿ.ಬಿ.ಎ, ಬಿ.ಎಸ್.ಸಿ, ಬಿ.ಎ, ಬಿ.ಕಾಂ ಬಿ.ಇ, ಎಂ.ಬಿ.ಎ, ಎಂ.ಕಾಂ ಎಂ.ಎಸ್.ಡಬ್ಲೂ, ಯಾವುದೇ ಪದವಿ

ಹುದ್ದೆ : ಇವೆಂಟ್ ಪ್ಲ್ಯಾನರ್, ವಯಸ್ಸು : 24 ರಿಂದ 30, ಸ್ಥಳ ಃ ಗದಗ, ಹುಬ್ಬಳ್ಳಿ, ಸೂಚನೆ : ಇಂಗ್ಲೀಷ ಮಾತನಾಡಲು ಮತ್ತು ಬರೆಯಲು ಕಡ್ಡಾಯವಾಗಿ ಬರಬೇಕು.

ನೇರ ಸಂರ್ದಶನದಲ್ಲಿ ಪಾಲ್ಗೋಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, 2 ರೆಸ್ಯೂಮೆ(ಬಯೋಡಾಟಾ)ಪ್ರತಿಗಳು, ಮತ್ತು ಆಧಾರ ಕಾರ್ಡ್ ಝೆರಾಕ್ಸ್ನೊಂದಿಗೆ ಭಾಗವಹಿಸಬಹುದು. ನೇರ ಸಂರ್ದಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ. ಯುವನಿಧಿ ಯೋಜನೇಯ ಫಲಾನುಭವಿಗಳು ಈ ನೇರ ಸಂದರ್ಶನದಲ್ಲಿ ಕಡ್ಡಾಯವಾಗಿ ಪಾಲ್ಗೋಬಹುದಾಗಿದೆ. ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ, 6363330688, 9535247194. ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇರ ಸಂರ್ದಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನೋಂದಣಿಯನ್ನು ನೇರ ಸಂರ್ದಶನದ ದಿನದಂದೇ ಮಾಡಿಸಬೇಕಾಗಿರುತ್ತದೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande