ಹುಬ್ಬಳ್ಳಿ, 19 ಜುಲೈ (ಹಿ.ಸ.) :
ಆ್ಯಂಕರ್ : ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಪರ್ಯಾಯ ಪೀಠಾಧಿಪತಿಗಳ ನೇಮಕ ಕುರಿತಂತೆ ಚಿಂತನೆ ನಡೆಯುತ್ತಿದ್ದು, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಜಯ ಮೃತ್ಯುಂಜಯ ಶ್ರೀಗಳು ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕೆಂದು 2019ರಲ್ಲಿ ನೋಟಿಸ್ ನೀಡಲಾಗಿತ್ತು. ಆದರೆ ಅವರು ರಾಜಕೀಯ ನಾಯಕರ ಅನುಯಾಯಿಗಳಂತೆ ವರ್ತಿಸುತ್ತಿದ್ದು, ಧರ್ಮ ಪ್ರಚಾರ ಬಿಟ್ಟು ನಗರಗಳಲ್ಲಿ ಜೀವನ ನಡೆಸುತ್ತಿದ್ದಾರೆಂದು ಆರೋಪಿಸಿದರು.
ಮೃತ್ಯುಂಜಯ ಶ್ರೀಗಳು, ಮಲಪ್ರಭಾ ನದಿಯ ದಡದಲ್ಲಿ ಹೊಸ ಮಠ ಕಟ್ಟುವುದಾಗಿ ತಿಳಿಸಿದ್ದು, ಸಮಾಜದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯನ್ನು ಟ್ರಸ್ಟ್ ಸ್ವಾಗತಿಸಿದೆ. ಆದರೆ ಅವರು ಪ್ರತ್ಯೇಕ ಮಠ ಆರಂಭಿಸುತ್ತಿದ್ದರೆ ಅದಕ್ಕೆ ವಿರೋಧವಿಲ್ಲ ಎಂದು ಹೇಳಿದರು.
ಶ್ರೀಗಳು ಬಿಜೆಪಿ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದು, ಮಾಧ್ಯಮಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಸಮಾಜದ ಕಲ್ಯಾಣದ ಬಗ್ಗೆ ಕಳಕಳಿ ಇಲ್ಲ ಎಂದು ಕಾಶಪ್ಪನವರ ಆರೋಪಿಸಿದರು.
ಅವರು ಮಠದ ಭದ್ರತೆಯ ಕುರಿತಂತೆ ಬೀಗ ಮುರಿತ ಹಾಗೂ ಅನೈತಿಕ ಚಟುವಟಿಕೆಗಳ ಬಗ್ಗೆ ಉಲ್ಲೇಖಿಸಿ. ಮಠದ ರಕ್ಷಣೆಗಾಗಿ ಸಿಸಿಟಿವಿ ಹಾಗೂ ಗೇಟ್ ಅಳವಡಿಸಲಾಗಿದೆ ಎಂದು ತಿಳಿಸಿದರು.
ಮೀಸಲಾತಿ ವಿಚಾರದಲ್ಲಿ ಮೃತ್ಯುಂಜಯ ಶ್ರೀಗಳು 2ಎ ಅಥವಾ 2ಡಿ ಕುರಿತಾಗಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು. 2ಡಿ ಮೀಸಲಾತಿಗೆ ಬೆಂಬಲವಿದ್ದರೆ, ಸರ್ಕಾರದಿಂದ ಸಂಬಂಧಿತ ಪ್ರಮಾಣಪತ್ರ ತರಿಸಬೇಕೆಂದು ಸವಾಲು ಹಾಕಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa