ಛತ್ತಿಸಗಢದ ಕಾಡುಗಳನ್ನು ಅದಾನಿಗೆ ಅರ್ಪಿಸಿದ ಬಿಜೆಪಿ : ಪ್ರಿಯಾಂಕಾ ವಾದ್ರಾ
ನವದೆಹಲಿ, 19 ಜುಲೈ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರ ರಾಜ್ಯದ ಕಾಡು ಪ್ರದೇಶಗಳನ್ನು ಅದಾನಿ ಒಡೆತನದ ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರಿಸುತ್ತಿದ್ದು, ಈ ಮೂಲಕ ಪೆಸಾ ಕಾಯ್ದೆ ಮತ್ತು ಎನ್‌ಜಿಟಿ ನಿರ್ದೇಶನಗಳ ಉಲ್ಲಂಘನೆ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮಾಜಿ ಮುಖ್ಯ
Priyanka


ನವದೆಹಲಿ, 19 ಜುಲೈ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರ ರಾಜ್ಯದ ಕಾಡು ಪ್ರದೇಶಗಳನ್ನು ಅದಾನಿ ಒಡೆತನದ ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರಿಸುತ್ತಿದ್ದು, ಈ ಮೂಲಕ ಪೆಸಾ ಕಾಯ್ದೆ ಮತ್ತು ಎನ್‌ಜಿಟಿ ನಿರ್ದೇಶನಗಳ ಉಲ್ಲಂಘನೆ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಈ ವಿಷಯವನ್ನು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಲು ಸಿದ್ಧರಾಗಿದ್ದ ವೇಳೆ, ಜಾರಿ ನಿರ್ದೇಶನಾಲಯ (ಇಡಿ) ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ಅವರ ಮಗನನ್ನು ಬಂಧಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಕುರಿತಾಗಿ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದು, ಇದು ಬಿಜೆಪಿಯ ಶೋಷಕ ನೀತಿಯ ಪ್ರತೀಕ. ಇದು ಪ್ರತಿಪಕ್ಷಗಳ ಧ್ವನಿಯನ್ನು ತಡೆ ಹಿಡಿಯುವ ಸಂಚು, ಎಂದು ಆರೋಪಿಸಿದ್ದಾರೆ.

ಕಳೆದ 11 ವರ್ಷಗಳಲ್ಲಿ, ಕೇಂದ್ರದ ಬಿಜೆಪಿ ಸರ್ಕಾರ, ಪ್ರತಿಪಕ್ಷಗಳ ವಿರುದ್ಧ ತನಿಖಾ ಸಂಸ್ಥೆಗಳ ದುರ್ಬಳಕೆಯ ಮೂಲಕ ದಮನ ನೀತಿ ಅನುಸರಿಸಿದೆ. ಆದರೆ ಈ ರೀತಿಯ ದಾಳಿ, ಬೆದರಿಕೆಗಳಿಂದ ಸತ್ಯವನ್ನು ನಿಗ್ರಹಿಸಲು ಸಾಧ್ಯವಿಲ್ಲ, ಎಂದು ಅವರು ಹೇಳಿದ್ದಾರೆ.

ಭೂಪೇಶ್ ಬಘೇಲ್ ಅವರಿಗೆಕಾಂಗ್ರೆಸ್ ಕಾರ್ಯಕರ್ತರ ಸಂಪೂರ್ಣ ಬೆಂಬಲವಿರುವುದಾಗಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande