ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರದ `ಮಕ್ಕಳ ಸ್ನೇಹಿ’ ಅಂಗನವಾಡಿ ಕೇಂದ್ರ : ವೈ.ಎಂ. ಸತೀಶ್
ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರದ `ಮಕ್ಕಳ ಸ್ನೇಹಿ’ ಅಂಗನವಾಡಿ ಕೇಂದ್ರ : ವೈ.ಎಂ. ಸತೀಶ್
ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರದ `ಮಕ್ಕಳ ಸ್ನೇಹಿ’ ಅಂಗನವಾಡಿ ಕೇಂದ್ರ : ವೈ.ಎಂ. ಸತೀಶ್


ಬಳ್ಳಾರಿ, 19 ಜುಲೈ (ಹಿ.ಸ.) :

ಆ್ಯಂಕರ್ : ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರ ಅನುದಾನದ ಅಡಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿಯೇ ವಿಶೇಷವಾದ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ 16.42 ಲಕ್ಷ ರೂಪಾಯಿಗಳಲ್ಲಿ ನಿರ್ಮಾಣ ಆಗಿರುವ `ಮಕ್ಕಳ ಸ್ನೇಹಿ’ ಅಂಗನವಾಡಿಯನ್ನು ಶನಿವಾರ ಉದ್ಘಾಟಿಸಿ, ಮಕ್ಕಳಿಗೆ ಅರ್ಪಿಸಲಾಯಿತು.

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 10ನೇ ವಾರ್ಡ್‍ನ ಮರಿಸ್ವಾಮಿ ಮಠದ ಪ್ರದೇಶದಲ್ಲಿ ನೀಲಕಂಠೇಶ್ವರ ದೇವಸ್ಥಾನದ ಹಿಂಭಾಗದಲ್ಲಿದ್ದ ಖಾಲಿ ಸ್ಥಳದಲ್ಲಿ ಅಂಗನವಾಡಿ ನಿರ್ಮಾಣವಾಗಿದ್ದು, ಶುದ್ಧವಾದ ಕುಡಿಯುವ ನೀರು, ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಮಕ್ಕಳಿಗೆ ಗಾಳಿ - ಬೆಳಕು ಸಿಗುವ ರೀತಿಯಲ್ಲಿ ನಿರ್ಮಾಣವಾಗಿದೆ.

ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ `ಮಕ್ಕಳ ಸ್ನೇಹಿ’ ಅಂಗನವಾಡಿ ಕೇಂದ್ರವನ್ನು ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿಯೇ ವಿಶೇಷವಾದ ಮತ್ತು ವಿಶಿಷ್ಟವಾದ ಹಾಗೂ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿದೆ. ಮರಿಸ್ವಾಮಿ ಮಠದ ಪ್ರದೇಶದ ಮಕ್ಕಳಿಗೆ ಈ ಸೌಲಭ್ಯ ನೆರವಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಅಂಗನವಾಡಿ ಕೇಂದ್ರದ ಸಿಬ್ಬಂದಿಯು, `ಅಂಗನವಾಡಿ ಕಟ್ಟಡವು ಬಾಡಿಗೆಯಲ್ಲಿ ನಿರ್ವಹಣೆ ಆಗುತ್ತಿತ್ತು. ಬಾಡಿಗೆಯನ್ನು ನಾನೇ ಪಾವತಿ ಮಾಡಿ, ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದೆ. ಈ ಬಗ್ಗೆ ವೀಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದೆ. ನನ್ನ ವೀಡಿಯೋವನ್ನು ವೀಕ್ಷಣೆ ಮಾಡಿದ್ದ ವಿಧಾನ ಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು, ಸ್ಪಂದಿಸಿ, ತಕ್ಷಣವೇ ಈ ಪ್ರದೇಶದಲ್ಲಿ ಅತ್ಯಂತ ಸುಸಜ್ಜಿತವಾದ ಮತ್ತು ಮಕ್ಕಳ ಸ್ನೇಹಿ ಆಗಿರುವ ಸ್ವಂತದ ಅಂಗನವಾಡಿ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ಈ ಕಟ್ಟಡಕ್ಕೆ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರ ಮಾಡಲಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳ ಪೋಷಕರು, `ಅತ್ಯಂತ ಸುಸಜ್ಜಿತವಾದ ಅಂಗನವಾಡಿಯನ್ನು ವಿಧಾನ ಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರ ಅನುದಾನದಲ್ಲಿ ನಿರ್ಮಿಸಲಾಗಿದೆ. ಕಟ್ಟಡವು ಚೆನ್ನಾಗಿದೆ. ಸಾಕಷ್ಟು ಗಾಳಿ - ಬೆಳಕು, ಕಲಿಕಾ ವಾತಾವರಣಕ್ಕೆ ಪೂರಕವಾಗಿದೆ. ಅನುದಾನ ನೀಡಿರುವ ವೈ.ಎಂ. ಸತೀಶ್ ಅವರಿಗೆ ಧನ್ಯವಾದಗಳು’ ಎಂದು ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸಿದರು.

ಈ ವಾರ್ಡ್‍ನ ಕಾರ್ಪೊರೇಟರ್ ಕೋನಂಕಿ ತಿಲಕ್ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande