ಟೆಹ್ರಾನ್, 16 ಜೂನ್ (ಹಿ.ಸ.) :
ಆ್ಯಂಕರ್ : ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಮೂರನೇ ದಿನಕ್ಕೂ ಮುಂದುವರೆದಿದ್ದು, ಎರಡು ದೇಶಗಳಲ್ಲೂ ಭಾರೀ ಪ್ರಾಣಹಾನಿ ಸಂಭವಿಸಿದೆ. ಇಸ್ರೇಲಿ ವಾಯುಪಡೆ ಇರಾನ್‌ನ ಹಲವು ನಗರಗಳ ಮೇಲೆ ದಾಳಿಯನ್ನು ನಡೆಸಿದ್ದು, ಇರಾನ್‌ನಲ್ಲಿ ಕನಿಷ್ಠ 406 ಮಂದಿ ಮೃತಪಟ್ಟಿದ್ದು, 654ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನೂ ಇರಾನ್ ಸರ್ಕಾರ ಅಧಿಕೃತ ಅಂಕಿಅಂಶಗಳನ್ನು ಪ್ರಕಟಿಸಿಲ್ಲ.
ಇರಾನ್‌ನ ಪ್ರತ್ಯುತ್ತರ ದಾಳಿಯಲ್ಲಿ ಇಸ್ರೇಲ್‌ನಲ್ಲಿ 14 ಮಂದಿ ಸಾವನ್ನಪ್ಪಿ, 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಟೆಹ್ರಾನ್ ಹಾಗೂ ಮಶಾದ್‌ನ ತೈಲ ಸಂಸ್ಕರಣಾಗಾರಗಳು, ವಸತಿ ಪ್ರದೇಶಗಳು ಹಾಗೂ ಸೇನಾ ಕೇಂದ್ರಗಳು ದಾಳಿಗೆ ಒಳಗಾಗಿದ್ದು, ಪರಿಸ್ಥಿತಿ ಭೀಕರವಾಗಿದೆ. ಇಸ್ರೇಲ್ ಕೂಡ ಶಸ್ತ್ರಾಸ್ತ್ರ ತಯಾರಿಕಾ ಘಟಕಗಳನ್ನು ತೆರವುಗೊಳಿಸಲು ಇರಾನ್ ಜನತೆಗೆ ಎಚ್ಚರಿಕೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa