ಜಮ್ಮು ಮತ್ತು ಕಾಶ್ಮೀರ : ಸಾಂಬಾ ಜಿಲ್ಲೆಯ ನಾಡ್ ಗ್ರಾಮದಲ್ಲಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ
ಸಾಂಬಾ, 11 ಜೂನ್ (ಹಿ.ಸ.) : ಆ್ಯಂಕರ್ : ಜಮ್ಮು ವಿಭಾಗದ ಸಾಂಬಾ ಜಿಲ್ಲೆಯ ನಾಡ್ ಗ್ರಾಮದಲ್ಲಿ, ಇಬ್ಬರು ಶಂಕಿತ ಭಯೋತ್ಪಾದಕರ ಚಲನವಲನದ ಬಗ್ಗೆ ಮಾಹಿತಿ ಲಭಿಸಿದ ಬೆನ್ನಲ್ಲೇ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ. ಗ್ರಾಮಸ್ಥರು ರಾತ್ರಿ ಸಮಯದಲ್ಲಿ ಶಾಲೆಯ ಬಳಿ ಶಂಕಿತ ಸಮವಸ್ತ್ರಧಾರಿ ವ್ಯಕ್ತಿಗಳನ
Search


ಸಾಂಬಾ, 11 ಜೂನ್ (ಹಿ.ಸ.) :

ಆ್ಯಂಕರ್ : ಜಮ್ಮು ವಿಭಾಗದ ಸಾಂಬಾ ಜಿಲ್ಲೆಯ ನಾಡ್ ಗ್ರಾಮದಲ್ಲಿ, ಇಬ್ಬರು ಶಂಕಿತ ಭಯೋತ್ಪಾದಕರ ಚಲನವಲನದ ಬಗ್ಗೆ ಮಾಹಿತಿ ಲಭಿಸಿದ ಬೆನ್ನಲ್ಲೇ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ.

ಗ್ರಾಮಸ್ಥರು ರಾತ್ರಿ ಸಮಯದಲ್ಲಿ ಶಾಲೆಯ ಬಳಿ ಶಂಕಿತ ಸಮವಸ್ತ್ರಧಾರಿ ವ್ಯಕ್ತಿಗಳನ್ನು ನೋಡಿದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಪೊಲೀಸ್ ಹಾಗೂ ಸೇನೆಯ ಜಂಟಿ ಪಡೆಗಳು ಇಂದು ಬೆಳಿಗ್ಗೆಯಿಂದಲೇ ಪ್ರದೇಶವನ್ನು ಸುತ್ತುವರೆದು ಪರಿಶೀಲನೆ ನಡೆಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande