ರುವಾಂಡಾ ಶಾಂತಿ ಒಪ್ಪಂದ ಉಲ್ಲಂಘನೆ : ಕಾಂಗೋ ಅಧ್ಯಕ್ಷರ ಆರೋಪ
ಕಿನ್ಶಾಸಾ, 09 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಅಧ್ಯಕ್ಷ ಫೆಲಿಕ್ಸ್ ತ್ಶಿಸೆಕೆಡಿ, ರುವಾಂಡಾ ಇತ್ತೀಚೆಗಿನ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಸಂಸತ್ತಿನಲ್ಲಿ ಆರೋಪಿಸಿದ್ದಾರೆ. ವಾಷಿಂಗ್ಟನ್‌ನಲ್ಲಿ ಅಮೆರಿಕ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಸಹಿ ಹಾಕಿ
ರುವಾಂಡಾ ಶಾಂತಿ ಒಪ್ಪಂದ ಉಲ್ಲಂಘನೆ : ಕಾಂಗೋ ಅಧ್ಯಕ್ಷರ ಆರೋಪ


ಕಿನ್ಶಾಸಾ, 09 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಅಧ್ಯಕ್ಷ ಫೆಲಿಕ್ಸ್ ತ್ಶಿಸೆಕೆಡಿ, ರುವಾಂಡಾ ಇತ್ತೀಚೆಗಿನ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಸಂಸತ್ತಿನಲ್ಲಿ ಆರೋಪಿಸಿದ್ದಾರೆ.

ವಾಷಿಂಗ್ಟನ್‌ನಲ್ಲಿ ಅಮೆರಿಕ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಸಹಿ ಹಾಕಿದ ಒಪ್ಪಂದಗಳ ಕೆಲವೇ ದಿನಗಳಲ್ಲಿ ಈ ಆರೋಪ ಹೊರಬಿದ್ದಿದ್ದು, ಪೂರ್ವ ಕಾಂಗೋದ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ.

M23 ಬಂಡಾಯ ಗುಂಪಿನ ಚಟುವಟಿಕೆಗಳು ಮತ್ತೆ ಹೆಚ್ಚಾಗಿದ್ದು, ರುವಾಂಡಾ ಅವರಿಗೇ ಬೆಂಬಲ ನೀಡುತ್ತಿದೆ ಎಂಬ ಕಾಂಗೋ ಸರ್ಕಾರದ ಆರೋಪಕ್ಕೆ ಈಗ ತ್ಶಿಸೆಕೆಡಿಯ ನೇರ ಹೇಳಿಕೆ ಹೊಸ ತಿರುವು ನೀಡಿದೆ. ರುವಾಂಡಾ ಮಾತ್ರ ಈ ಆರೋಪಗಳನ್ನು ನಿರಂತರವಾಗಿ ತಳ್ಳಿ ಹಾಕುತ್ತಿದೆ.

ವಾರಾಂತ್ಯದಲ್ಲಿ M23 ಬಂಡುಕೋರರು ಬುರುಂಡಿ ಗಡಿಯ ಸಮೀಪದ ಲುವುಂಗಿ ಗ್ರಾಮವನ್ನು ವಶಪಡಿಸಿಕೊಂಡಿದ್ದು, ಸ್ಥಳೀಯರು ಇದನ್ನು ದೃಢಪಡಿಸಿದ್ದಾರೆ. ಇದರ ನಡುವೆ, ಹಿಂಪಡೆಯುತ್ತಿದ್ದ ಕಾಂಗೋ ಸೇನೆ ಮತ್ತು ಸ್ಥಳೀಯ ವಜಲೆಂಡೋ ರಕ್ಷಣಾ ಪಡೆಗಳ ನಡುವೆ ಸಾಂಗೆ ಪಟ್ಟಣದಲ್ಲಿ ಘರ್ಷಣೆ ಉಂಟಾಗಿದೆ.

ಭಾನುವಾರ ನಡೆದ ಬಾಂಬ್/ಗ್ರೆನೇಡ್ ದಾಳಿಯಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದರೆ, ಹಲವರು ಗಾಯಗೊಂಡಿದ್ದಾರೆ. ನಾಗರಿಕರು ಹಂಚಿದ ಚಿತ್ರಗಳಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಹಲವಾರು ಮೃತ ದೇಹಗಳು, ಇಬ್ಬರು ಮಕ್ಕಳು ಸೇರಿದಂತೆ, ಕಾಣಿಸಿಕೊಂಡಿವೆ. ದಾಳಿಗೆ ಯಾರು ಕಾರಣ ಎನ್ನುವುದು ಸ್ಪಷ್ಟವಾಗಿಲ್ಲ.

ಒಪ್ಪಂದಕ್ಕೆ ಸಹಿ ಹಾಕಿದರೂ, ಪ್ರದೇಶದಲ್ಲಿ ಹಿಂಸಾಚಾರ ಕಡಿಮೆಯಾಗದಿರುವುದು ಹೊಸ ಒಪ್ಪಂದಗಳ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನೆ ಹುಟ್ಟಿಸಿದೆ. ದಶಕಗಳಿಂದ ಹಿಂಸೆಗೆ ತುತ್ತಾಗಿರುವ ಪೂರ್ವ ಕಾಂಗೋದ ಶಾಂತಿ ಪ್ರಕ್ರಿಯೆ ಇನ್ನೂ ಅತ್ಯಂತ ದುರ್ಬಲವಾಗಿಯೇ ಮುಂದುವರಿಯುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande