ಶಾರುಖ್ ಖಾನ್ ಹುಟ್ಟುಹಬ್ಬದ ಸಂಭ್ರಮ
ಹಾಕಿ
Birthday


ಮುಂಬಯಿ, 02 ನವೆಂಬರ್ (ಹಿ.ಸ.) :

ಆ್ಯಂಕರ್ : ಬಾಲಿವುಡ್ ನಟ ಶಾರುಖ್ ಖಾನ್ ಅವರ 60ನೇ ಹುಟ್ಟುಹಬ್ಬದಂದು ಮುಂಬೈನ ನಿವಾಸ ಮನ್ನತ್ ಹೊರಗೆ ಸಾವಿರಾರು ಅಭಿಮಾನಿಗಳು ಜಮಾಯಿಸಿ ಸಂಭ್ರಮಿಸಿದರು. ಮಧ್ಯರಾತ್ರಿ 12 ಗಂಟೆ ವೇಳೆ ಜಪಾನ್, ದುಬೈ, ಈಜಿಪ್ಟ್ ಹಾಗೂ ಜರ್ಮನಿಯಿಂದ ಬಂದ ಅಭಿಮಾನಿಗಳು ಶಾರುಖ್, ಶಾರುಖ್ ಎಂದು ಘೋಷಣೆ ಹಾಕಿದರು.

ಮನ್ನತ್ ಹೊರಗಿನ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕೇಕ್ ಕತ್ತರಿಸಿ, ನೃತ್ಯಮಾಡಿ, “ಬಾರ್ ಬಾರ್ ದಿನ್ ಯೇ ಆಯೇ” ಹಾಡುತ್ತಾ ಕಿಂಗ್ ಖಾನ್‌ಗೆ ಶುಭಾಶಯ ಕೋರಿದರು. ಭಾರಿ ಜನಸಂದಣಿ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಬಿಗಿಗೊಳಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande