
ನವದೆಹಲಿ, 02 ನವೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಛತ್ತೀಸ್‌ಗಢದ ನವ ರಾಯ್‌ಪುರ ಅಟಲ್ ನಗರದಲ್ಲಿ ನಡೆದ ತಮ್ಮ ಭೇಟಿಯ ನೆನಪುಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಹಂಚಿಕೊಂಡು, ಜನತೆಯ ಉತ್ಸಾಹ ಮತ್ತು ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿ ಅವರು ಛತ್ತೀಸ್‌ಗಢದ ಹೊಸ ವಿಧಾನಸಭಾ ಕಟ್ಟಡವನ್ನು ಉದ್ಘಾಟಿಸಿದ ಸಂದರ್ಭದ ಚಿತ್ರಗಳನ್ನು ಹಂಚಿಕೊಂಡು, ಈ ಕಟ್ಟಡವು ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ, ಮಳೆನೀರು ಸಂರಕ್ಷಣೆ ತಂತ್ರಜ್ಞಾನ ಹೊಂದಿದ ಹಸಿರು ಕಟ್ಟಡ ಎಂಬುದಾಗಿ ತಿಳಿಸಿದ್ದಾರೆ. ಇದು “ಅಭಿವೃದ್ಧಿ ಹೊಂದಿದ ಛತ್ತೀಸ್‌ಗಢದತ್ತ ಒಂದು ಪ್ರಮುಖ ಹೆಜ್ಜೆ” ಎಂದು ಅವರು ಬರೆದಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಭಾರತ ರತ್ನ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. “ಈ ಪ್ರತಿಮೆ ಮುಂದಿನ ಪೀಳಿಗೆಗೆ ಶಾಶ್ವತ ಸ್ಫೂರ್ತಿಯ ಮೂಲವಾಗಲಿದೆ” ಎಂದು ಅವರು ಹೇಳಿದ್ದಾರೆ.
“ತಾಯಿಗಾಗಿ ಒಂದು ಮರ” ಅಭಿಯಾನದ ಭಾಗವಾಗಿ ಅವರು ಒಂದು ಮರವನ್ನು ನೆಟ್ಟು, ಸತ್ಯ ಸಾಯಿ ಸಂಜೀವಿನಿ ಆಸ್ಪತ್ರೆಗೆ ಭೇಟಿ ನೀಡಿ ಜನ್ಮಜಾತ ಹೃದಯ ಕಾಯಿಲೆಗಳನ್ನು ಜಯಿಸಿದ ಮಕ್ಕಳನ್ನು ಭೇಟಿಯಾದರು. “ಅವರ ನಗು ಮತ್ತು ಉತ್ಸಾಹವು ನನಗೆ ಹೊಸ ಚೈತನ್ಯ ನೀಡಿತು,” ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
ಛತ್ತೀಸ್‌ಗಢ ರಾಜ್ಯದ 25ನೇ ವಾರ್ಷಿಕೋತ್ಸವದ ಸಂಭ್ರಮದ ವೇಳೆ ನಡೆದ ಈ ಕಾರ್ಯಕ್ರಮದಲ್ಲಿ ಜನರ ಭಾರೀ ಹಾಜರಾತಿ ಸಂತಸ ತಂದಿತು ಎಂದು ಮೋದಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa