
ಶ್ರೀನಗರ, 02 ನವೆಂಬರ್ (ಹಿ.ಸ.) :
ಆ್ಯಂಕರ್ : ಶ್ರೀನಗರದಲ್ಲಿ ಭಾನುವಾರ ನಡೆದ ಕಾಶ್ಮೀರ ಮ್ಯಾರಥಾನ್ 2.0 ನಲ್ಲಿ ಭಾರತ ಸೇರಿದಂತೆ 11 ದೇಶಗಳ 1500 ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದರು. ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ಮತ್ತು ಜಮ್ಮು-ಕಾಶ್ಮೀರ ಕ್ರೀಡಾ ಮಂಡಳಿ ಸಂಯುಕ್ತವಾಗಿ ಈ ಸ್ಪರ್ಧೆಯನ್ನು ಆಯೋಜಿಸಿತ್ತು.
ಬೆಳಿಗ್ಗೆ 6 ಗಂಟೆಗೆ ಪೋಲೋ ವ್ಯೂನಿಂದ ಆರಂಭವಾದ ಮ್ಯಾರಥಾನ್‌ನಲ್ಲಿ ಜರ್ಮನಿ, ಕೀನ್ಯಾ, ಜಪಾನ್, ಅಮೆರಿಕಾ, ಇಥಿಯೋಪಿಯಾ ಹಾಗೂ ಶ್ರೀಲಂಕಾದ ಆಟಗಾರರು ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಆಡಳಿತಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಬಾಲಿವುಡ್ ಕಲಾವಿದರು ಹಾಜರಿದ್ದರು.
ಕಾಶ್ಮೀರ ಪ್ರವಾಸೋದ್ಯಮ ನಿರ್ದೇಶಕ ರಾಜಾ ಯಾಕೂಬ್, “ಈ ಮ್ಯಾರಥಾನ್ ಕಣಿವೆಯ ಅಚಲ ಮನೋಭಾವ ಮತ್ತು ಶಾಂತಿಯ ಸಂದೇಶವನ್ನು ವಿಶ್ವಕ್ಕೆ ಸಾರುತ್ತದೆ ಎಂದು ಹೇಳಿದರು.
ಪೂರ್ಣ (42 ಕಿಮೀ) ಮತ್ತು ಅರ್ಧ (21 ಕಿಮೀ) ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿಜೇತರಿಗೆ ಒಟ್ಟು ₹25 ಲಕ್ಷ ಬಹುಮಾನ ವಿತರಿಸಲಾಯಿತು. ದಾಲ್ ಸರೋವರ ಮತ್ತು ಜಬರ್ವಾನ್ ಪರ್ವತ ಶ್ರೇಣಿಯ ಹಿನ್ನಲೆಯಲ್ಲಿ ನಡೆದ ಈ ಓಟವನ್ನು ವಿದೇಶಿ ಕ್ರೀಡಾಪಟುಗಳು “ವಿಶ್ವದ ಅತ್ಯಂತ ಸುಂದರ ಮ್ಯಾರಥಾನ್ ಮಾರ್ಗಗಳಲ್ಲಿ ಒಂದಾಗಿದೆ” ಎಂದು ಪ್ರಶಂಸಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa