
ವಿಜಯಪುರ, 02 ನವೆಂಬರ್ (ಹಿ.ಸ.) :
ಆ್ಯಂಕರ್ : ಹೊಸದಾಗಿ ಪ್ರಸಕ್ತ ಸಾಲಿನಲ್ಲಿ
ಸ್ಥಾಪನೆಯಾಗಿರುವ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿನಲ್ಲಿ ಅರ್ಹರಿಂದ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರಿವು ಶೈಕ್ಷಣಿಕ ಸಾಲ ಯೋಜನೆ,ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ (ಹೊಸದಾಗಿ),ಸ್ವಾವಲಂಬಿ ಸಾರಥಿ ಯೋಜನೆ,ಶ್ರಮಶಕ್ತಿ ಜನರಲ್ ಸಾಲ ಯೋಜನೆ,ವೃತ್ತಿ ಪ್ರೋತ್ಸಾಹ ಸಾಲ ಯೋಜನೆ,ಗಂಗಾ ಕಲ್ಯಾಣ ಯೋಜನೆ,ವ್ಯಾಪಾರ-ಉದ್ದಿಮೆ ನೇರ ಸಾಲ ಯೋಜನೆ ಹಾಗೂ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆಗಳಡಿ ಸಹಾಯಧನ ಸೌಲಭ್ಯ ಪಡೆಯಲು ಅರ್ಜಿದಾರರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರಬೇಕು.ರಾಜ್ಯದ ಖಾಯಂ ನಿವಾಸಿ ಆಗಿರಬೇಕು.ಅರಿವು ಹಾಗೂ ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ ಹೊರತು ಪಡಿಸಿ,18 ರಿಂದ 55 ವಯೋಮಿತಿಯಲ್ಲಿರಬೇಕು.
ಅರ್ಜಿದಾರರ ಆಧಾರ ಕಾರ್ಡ್,ಚುನಾವಣಾ ಗುರುತಿನ ಚೀಟಿ,ಪಡಿತರ ಚೀಟಿ,ಬ್ಯಾಂಕ್ ಖಾತೆ ಪುಸ್ತಕ ಒಳಗೊಂಡಂತೆ ಅಗತ್ಯ ದಾಖಲೆ ಹೊಂದಿರಬೇಕು.ಈ ಹಿಂದೆ ಕೆಎಂಡಿಸಿ ಮೂಲಕ ಸಹಾಯಧನ ಸೌಲಭ್ಯ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಆನಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸಲ್ಲಿಸಿರುವ ಎಲ್ಲಾ ದಾಖಲೆ ಪ್ರತಿ ಸಂಬಂಧಿಸಿದ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ಅರ್ಜಿಯನ್ನು ವೆಬ್ಸೈಟ್ https:kccdclonline.karnataka.gov.in ಮೂಲಕ ಅರ್ಜಿಯನ್ನು ದಿನಾಂಕ:30-11-2025ರೊಳಗಾಗಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ (ನಿ), ಮೌಲಾನಾ ಆಝಾದ್ ಭವನ, ಜಿಲ್ಲಾ ಪಂಚಾಯತ ರಸ್ತೆ,ಕನಕದಾಸ ಬಡಾವಣೆ,ದೂರವಾಣಿ ಸಂಖ್ಯೆ 08352-278344 ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande