ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕೇನ್ ವಿಲಿಯಮ್ಸನ್ ವಿದಾಯ
ಆಕ್ಲೆಂಡ್, 02 ನವೆಂಬರ್ (ಹಿ.ಸ.) : ಆ್ಯಂಕರ್ : ನ್ಯೂಜಿಲೆಂಡ್‌ನ ದಂತಕಥೆ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಕೇನ್ ವಿಲಿಯಮ್ಸನ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ಗೆ ಕೇವಲ ನಾಲ್ಕು ತಿಂಗಳ ಮೊದಲು ಈ ಮಹತ್ವದ ನಿರ್ಧಾರವನ್ನು ಅವರು ಪ್ರಕಟಿಸಿ
Retire


ಆಕ್ಲೆಂಡ್, 02 ನವೆಂಬರ್ (ಹಿ.ಸ.) :

ಆ್ಯಂಕರ್ : ನ್ಯೂಜಿಲೆಂಡ್‌ನ ದಂತಕಥೆ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಕೇನ್ ವಿಲಿಯಮ್ಸನ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ಗೆ ಕೇವಲ ನಾಲ್ಕು ತಿಂಗಳ ಮೊದಲು ಈ ಮಹತ್ವದ ನಿರ್ಧಾರವನ್ನು ಅವರು ಪ್ರಕಟಿಸಿದ್ದಾರೆ.

ವಿಲಿಯಮ್ಸನ್ 2011 ರಿಂದ 93 ಟಿ20 ಪಂದ್ಯಗಳಲ್ಲಿ ಆಡಿದ್ದು, 33 ಸರಾಸರಿಯಲ್ಲಿ 2,575 ರನ್ ಗಳಿಸಿ ನ್ಯೂಜಿಲೆಂಡ್ ಪರ ಎರಡನೇ ಅತಿ ಹೆಚ್ಚು ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಅವರು 18 ಅರ್ಧಶತಕಗಳು ಮತ್ತು 95 ರ ಅತ್ಯಧಿಕ ಸ್ಕೋರ್ ದಾಖಲಿಸಿದ್ದಾರೆ. ನಾಯಕನಾಗಿ 75 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ, 2016 ಮತ್ತು 2022ರ ಸೆಮಿಫೈನಲ್‌ಗಳಿಗೆ ಹಾಗೂ 2021ರ ಟಿ20 ವಿಶ್ವಕಪ್ ಫೈನಲ್‌ಗೆ ತಂಡವನ್ನು ಮುನ್ನಡೆಸಿದ್ದಾರೆ.

“ಈ ಪ್ರಯಾಣ ಅತ್ಯಂತ ವಿಶಿಷ್ಟ. ಈಗ ಮುಂದಿನ ಹಂತಕ್ಕೆ ತಯಾರಿ ನಡೆಸಲು ಸರಿಯಾದ ಸಮಯ ಬಂದಿದೆ. ತಂಡದಲ್ಲಿ ಅಪಾರ ಪ್ರತಿಭೆ ಇದೆ ಮಿಚ್ ಸ್ಯಾಂಟ್ನರ್ ಅದ್ಭುತ ನಾಯಕನಾಗುತ್ತಾರೆ ಎಂಬ ವಿಶ್ವಾಸವಿದೆ,” ಎಂದು ವಿಲಿಯಮ್ಸನ್ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande