
ಚಿತ್ರದುರ್ಗ, 02 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾ ಪಂಚಾಯತ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ವತಿಯಿಂದ 09 ರಿಂದ 16 ವರ್ಷದ ಮಕ್ಕಳಿಗಾಗಿ ಬೆಂಗಳೂರಿನ ರಾಜ್ಯ ಬಾಲಭವನ ಸೊಸೈಟಿಯಲ್ಲಿ ನಡೆಯುವ ರಾಜ್ಯ ಮಟ್ಟದ ಕಲಾಶ್ರೀ ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ಲಾಮಟ್ಟದಲ್ಲಿ ನವೆಂಬರ್ 10ರಂದು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಸೃಜನಾತ್ಮಕ ಕಲೆ-ಚಿತ್ರಕಲೆ, ಕರಕುಶಲತೆ, ಜೇಡಿಮಣ್ಣಿನ ಕಲೆ, (ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು. ಸೃಜನಾತ್ಮಕ ಬರವಣಿಗೆ;-ಕಥೆ, ಕವನ, ಪ್ರಬಂಧ ಬರೆಯುವುದು, (ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು). ಸೃಜನಾತ್ಮಕ ಪ್ರದರ್ಶನ ಕಲೆ; ಶಾಸ್ತ್ರೀಯನೃತ್ಯ, ಜಾನಪದನೃತ್ಯ, ಕರ್ನಾಟಕ ಶಾಸ್ತ್ರೀಯಸಂಗೀತ, ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ಏಕಪಾತ್ರಾಭಿನಯ ಯೋಗನೃತ್ಯ, ಮ್ಯಾಜಿಕ್ ಇತ್ಯಾದಿ ಯಾವುದಾದರೊಂದು ಕಲೆಯನ್ನು ಮಾತ್ರ ಪ್ರದರ್ಶಿಸಲು ಅವಕಾಶವಿರುತ್ತದೆ, (ಗುಂಪು ಪ್ರದರ್ಶನಕ್ಕೆ ಅವಕಾಶವಿರುವುದಿಲ್ಲ). ವಿಜ್ಞಾನದಲ್ಲಿ ಸೃಜನಾತ್ಮಕ ಅವಿಷ್ಕಾರ; ವಿಜ್ಞಾನಕ್ಕೆ ಸಬಂಧಪಟ್ಟಂತೆ ಒಂದು ವಿಷಯದಬಗ್ಗೆ ಮಾದರಿ ಪ್ರದರ್ಶನ ಹಾಗೂ ವಿವರಣೆ ಮತ್ತು ವಿಜ್ಞಾನಕ್ಷೇತ್ರಕ್ಕೆ ಸಂಬಂಧಿಸಿದತೀರ್ಪುಗಾರರ ಇನ್ನೀತರೆ ಪ್ರೆಶ್ನೆಗಳಿಗೆ ಉತ್ತರ (ಪ್ರತ್ಯಕ ಮಾದರಿಪ್ರದರ್ಶನ ಮಾಡುವುದು ಕಡ್ಡಾಯ), ಅಂಗವಿಕಲ/ಬುಡಕಟ್ಟು ಪ್ರದೇಶದ ಮಕ್ಕಳಿಗಾಗಿ ಯಾವುದೇ ಪ್ರಕಾರದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಿ ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ಇದೇ ನವೆಂಬರ್ 8ರ ಸಂಜೆ 5 ಗಂಟೆಯ ಒಳಗಾಗಿ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಕಾರ್ಯದರ್ಶಿಗಳು ಜಿಲ್ಲಾ ಬಾಲಭವನ ಸಮಿತಿ, ಜಿಲ್ಲಾ ಬಾಲಭವನ ಆವರಣ ಚಿತ್ರದುರ್ಗ ಇಲ್ಲಿ ಅರ್ಜಿಯನ್ನು ಸಲ್ಲಿಸಿ ನೋಂದಾಯಿಸಬೇಕಾಗಿರುತ್ತದೆ, ಜಿಲ್ಲಾಮಟ್ಟದಲ್ಲಿ ಆಯ್ಕೆಯಾದ ಮಕ್ಕಳಿಗೆ ಬಹುಮಾನವನ್ನು ನೀಡಿ ರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳಿಗೆ ಕಳುಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa