CMS-03 ಉಡಾವಣೆಗೆ ಇಸ್ರೋ ಸಜ್ಜು
ನವದೆಹಲಿ, 02 ನವೆಂಬರ್ (ಹಿ.ಸ.) : ಆ್ಯಂಕರ್ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಹೆಜ್ಜೆ ಇಡುವ ಹಂತಕ್ಕೆ ತಲುಪಿದೆ. ಸಂವಹನ ಉಪಗ್ರಹ CMS-03 ಉಡಾವಣೆಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಸಿದ್ಧತೆಗಳು ಪೂರ್ಣಗೊಂಡಿದ್ದು, ಇಂದು ಸಂಜೆ 5:26ಕ್ಕೆ ಆಂಧ್ರ ಪ್ರದೇಶದ ಶ್ರೀಹರ
Isro


ನವದೆಹಲಿ, 02 ನವೆಂಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಹೆಜ್ಜೆ ಇಡುವ ಹಂತಕ್ಕೆ ತಲುಪಿದೆ. ಸಂವಹನ ಉಪಗ್ರಹ CMS-03 ಉಡಾವಣೆಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಸಿದ್ಧತೆಗಳು ಪೂರ್ಣಗೊಂಡಿದ್ದು, ಇಂದು ಸಂಜೆ 5:26ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ನಡೆಯಲಿದೆ.

ಸುಮಾರು 4,400 ಕೆಜಿ ತೂಕದ CMS-03 ಉಪಗ್ರಹವು ಭಾರತದಿಂದ ಉಡಾವಣೆಯಾಗುವ ಅತ್ಯಂತ ಭಾರವಾದ ಸಂವಹನ ಉಪಗ್ರಹ ಎನ್ನುವ ದಾಖಲೆ ನಿರ್ಮಾಣ ಮಾಡಲಿದೆ. ಈ ಉಪಗ್ರಹವು ಭಾರತದ ಪ್ರದೇಶ ಮತ್ತು ಸುತ್ತಮುತ್ತಲಿನ ಮಹಾಸಾಗರ ಪ್ರದೇಶಗಳಿಗೆ ಬಹು-ಬ್ಯಾಂಡ್ ಸಂವಹನ ಸೇವೆಗಳನ್ನು ಒದಗಿಸಲಿದ್ದು, C, ವಿಸ್ತೃತ C ಮತ್ತು Ku ಬ್ಯಾಂಡ್‌ಗಳಲ್ಲಿ ಧ್ವನಿ, ಡೇಟಾ ಹಾಗೂ ವೀಡಿಯೋ ಸಂಪರ್ಕಕ್ಕಾಗಿ ಟ್ರಾನ್ಸ್‌ಪಾಂಡರ್‌ಗಳನ್ನು ಹೊಂದಿದೆ.

ಉಡಾವಣೆಗೆ ಮುನ್ನ, ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ನೇತೃತ್ವದ ವಿಜ್ಞಾನಿಗಳ ತಂಡವು ಭಗವಾನ್ ಶ್ರೀ ವೆಂಕಟೇಶ್ವರನ ಆಶೀರ್ವಾದವನ್ನು ಕೋರಿ ವಿಶೇಷ ಪೂಜೆ ಸಲ್ಲಿಸಿದೆ.

CMS-03 ಯಶಸ್ವಿ ಉಡಾವಣೆಯು ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಸಾಮರ್ಥ್ಯವನ್ನು ಮತ್ತಷ್ಟು ಎತ್ತರಕ್ಕೆ ಏರಿಸಲಿದೆ ಎಂದು ವಿಜ್ಞಾನ ವಲಯದಲ್ಲಿ ವಿಶ್ವಾಸ ವ್ಯಕ್ತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande