
ನವದೆಹಲಿ, 02 ನವೆಂಬರ್ (ಹಿ.ಸ.) :
ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆಯ ಎರಡನೇ ಹಂತದ ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷವು ಭಾನುವಾರ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.
ಪಕ್ಷದ ಉನ್ನತ ನಾಯಕತ್ವದಿಂದ ಹಿಡಿದು ಯುವ ಮುಖಗಳವರೆಗೆ ಎಲ್ಲರನ್ನೂ ಒಳಗೊಂಡಿರುವ ಈ ಪಟ್ಟಿಯು ಕಾಂಗ್ರೆಸ್ ಬೃಹತ್ ಪ್ರಚಾರ ತಂತ್ರದ ಸೂಚಕವಾಗಿದೆ.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರಮುಖ ಸ್ಟಾರ್ ಪ್ರಚಾರಕರಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಭೂಪೇಶ್ ಬಘೇಲ್, ಸುಖ್ವಿಂದರ್ ಸಿಂಗ್ ಸುಖು ಅವರಂತಹ ಹಿರಿಯ ಮುಖಂಡರಿಗೂ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.
ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್, ಅಧೀರ್ ರಂಜನ್ ಚೌಧರಿ, ಮೀರಾ ಕುಮಾರ್, ಸಚಿನ್ ಪೈಲಟ್, ರಣದೀಪ್ ಸುರ್ಜೇವಾಲಾ, ಗೌರವ್ ಗೊಗೊಯ್, ತಾರಿಕ್ ಅನ್ವರ್ ಸೇರಿದಂತೆ ಹಲವಾರು ಪ್ರಮುಖರು ಕೂಡ ಪಟ್ಟಿಯಲ್ಲಿದ್ದಾರೆ.
ಯುವ ಮುಖಗಳಾದ ಕನ್ಹಯ್ಯ ಕುಮಾರ್, ಇಮ್ರಾನ್ ಪ್ರತಾಪ್‌ಗಢಿ, ಸುಪ್ರಿಯಾ ಶ್ರೀನಾಟೆ, ಮತ್ತು ಜಿಗ್ನೇಶ್ ಮೇವಾನಿ ಅವರು ಹೊಸ ತಲೆಮಾರಿನ ಪ್ರತಿನಿಧಿಗಳಾಗಿ ಗಮನ ಸೆಳೆದಿದ್ದಾರೆ.
ಬಿಹಾರದ ಸ್ಥಳೀಯ ನಾಯಕತ್ವವನ್ನು ಬಲಪಡಿಸಲು ಮದನ್ ಮೋಹನ್ ಝಾ, ಶಕೀಲ್ ಅಹ್ಮದ್ ಖಾನ್, ಅಖಿಲೇಶ್ ಪ್ರಸಾದ್ ಸಿಂಗ್, ರಾಜೇಶ್ ಕುಮಾರ್ ರಾಮ್ ಹಾಗೂ ರಾಜೇಶ್ ರಂಜನ್ (ಪಪ್ಪು ಯಾದವ್), ಪ್ರಮೋದ್ ತಿವಾರಿ, ಸುಬೋಧ್ಕಾಂತ್ ಸಹಾಯ್, ಅಜಯ್ ರೈ ಮುಂತಾದ ನಾಯಕರಿಗೂ ಸ್ಥಾನ ನೀಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa