
ಪಾಟ್ನಾ, 02 ನವೆಂಬರ್ (ಹಿ.ಸ.) :
ಆ್ಯಂಕರ್ : ಮೊಕಾಮಾ ದುಲಾರ್‌ಚಂದ್ ಯಾದವ್ ಹತ್ಯೆ ಪ್ರಕರಣದಲ್ಲಿ ಜೆಡಿಯು ಅಭ್ಯರ್ಥಿ ಮತ್ತು ಮಾಜಿ ಶಾಸಕ ಅನಂತ್ ಸಿಂಗ್ ಅವರನ್ನು ಪಾಟ್ನಾ ಪೊಲೀಸರು ನಿನ್ನೆ ತಡರಾತ್ರಿ ಬಾರ್ಹ್‌ನ ಕಾರ್ಗಿಲ್ ಮಾರುಕಟ್ಟೆಯಿಂದ ಬಂಧಿಸಿದ್ದಾರೆ. ಅವರಿಬ್ಬರು ಸಹಚರರಾದ ಮಣಿಕಾಂತ್ ಠಾಕೂರ್ ಮತ್ತು ರಂಜೀತ್ ರಾಮ್ ಸಹ ಬಂಧಿತರಾಗಿದ್ದಾರೆ.
ಅಕ್ಟೋಬರ್ 30ರಂದು ಟಾರ್ಟರ್ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ದುಲಾರ್‌ಚಂದ್ ಯಾದವ್ (75) ಮೃತರಾಗಿದ್ದರು. ಮರಣೋತ್ತರ ವರದಿಯಲ್ಲಿ ಗುಂಡೇಟು ಗಾಯಗಳು ಪತ್ತೆಯಾಗಿದ್ದು, ಅನಂತ್ ಸಿಂಗ್ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ.
ದುಲಾರ್‌ಚಂದ್ ಯಾದವ್ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಆಪ್ತರಾಗಿದ್ದು, ಈ ಬಾರಿ ಜನಸುರಾಜ್ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa