ಟನಲ್ ರೋಡ್ ಯೋಜನೆ ವಿರುದ್ಧ ಬಿಜೆಪಿ ಸಹಿ ಸಂಗ್ರಹ ಅಭಿಯಾನ
ಬೆಂಗಳೂರು, 02 ನವೆಂಬರ್ (ಹಿ.ಸ.) : ಆ್ಯಂಕರ್ : ರಾಜಧಾನಿಯ ವಿವಾದಿತ ಟನಲ್ ರೋಡ್ ಯೋಜನೆ ವಿರುದ್ಧ ಬಿಜೆಪಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. “ಬೆಂಗಳೂರು ರಕ್ಷಿಸಿ, ಟನಲ್ ರೋಡ್ ನಿಲ್ಲಿಸಿ” ಘೋಷಣೆಯಡಿ ನಡೆದ ಈ ಅಭಿಯಾನಕ್ಕೆ ಆರ್. ಅಶೋಕ್ ಮತ್ತು ತೇಜಸ್ವಿ ಸೂರ್ಯ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ
Ashok


ಬೆಂಗಳೂರು, 02 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಜಧಾನಿಯ ವಿವಾದಿತ ಟನಲ್ ರೋಡ್ ಯೋಜನೆ ವಿರುದ್ಧ ಬಿಜೆಪಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. “ಬೆಂಗಳೂರು ರಕ್ಷಿಸಿ, ಟನಲ್ ರೋಡ್ ನಿಲ್ಲಿಸಿ” ಘೋಷಣೆಯಡಿ ನಡೆದ ಈ ಅಭಿಯಾನಕ್ಕೆ ಆರ್. ಅಶೋಕ್ ಮತ್ತು ತೇಜಸ್ವಿ ಸೂರ್ಯ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ ಈ ಯೋಜನೆ ವಿಐಪಿಗಳಿಗಾಗಿ, ಸಾಮಾನ್ಯ ಜನರಿಗೆ ಅಲ್ಲ. ಬೈಕ್, ಸೈಕಲ್‌ಗೆ ಎಂಟ್ರಿ ಇಲ್ಲ. ಕೇವಲ ಕಾರಿಗೆ ಮಾತ್ರ. 8,000 ಕೋಟಿ ರೂ. ಯೋಜನೆಗೆ ಸಾಲ ಮಾಡಿ ಬಡ್ಡಿ ಹೊರೆ ಜನರ ಮೇಲೆ ಹಾಕುತ್ತಿದ್ದಾರೆ. ಅನುಮತಿ ಇಲ್ಲದೆ ಸುರಂಗ ತೋಡುವುದು ಕಾನೂನು ಉಲ್ಲಂಘನೆ. ಮೊದಲು ಮೇಲ್ಮೈಯ ರಸ್ತೆಯ ಗುಂಡಿಗಳನ್ನು ಮುಚ್ಚಲಿ ಎಂದು ವಾಗ್ದಾಳಿ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande