ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಜಯಂತಿ ಆಚರಣೆ
ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಜಯಂತಿ ಆಚರಣೆ
ಚಿತ್ರ : ಮಾಜಿ ಪ್ರಧಾನಿ ಜವಾಹಲ್ ಲಾಲ್ ನೆಹರು ಅವರ ಜಯಂತಿಯನ್ನು ಕೋಲಾರ ಜಿಲ್ಲಾ ಕಾಂಗ್ರೆಸ್ ಘಟಕದ ಕಚೇರಿಯಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾಯಿತು.


ಕೋಲಾರ, ೧೪ ನವಂಬರ್ (ಹಿ.ಸ.) :

ಆ್ಯಂಕರ್ : ಮಾಜಿ ಪ್ರಧಾನಿ ಜವಾಹಲ್ ಲಾಲ್ ನೆಹರು ಅವರ ಜಯಂತಿಯನ್ನು ಜಿಲ್ಲಾ ಕಾಂಗ್ರೆಸ್ ಘಟಕದ ಕಚೇರಿಯಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾಯಿತು.

ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ನೆಹರು ಅವರು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಬಡತನ ನಿರ್ಮೂಲನೆ, ದೇಶದ ಭದ್ರತೆಗಾಗಿ ಅವರು ಕೈಗೊಂಡ ನಿರ್ಣಯಗಳು ಅಭಿವೃದ್ದಿಗೆ ಪೂರಕವಾಗಿತ್ತು ನೆಹರು ಅವರು ಮಹಾತ್ಮ ಗಾಂಧೀಜಿ ಅವರೊಂದಿಗೆ ಸಕ್ರಿಯವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಬ್ರಿಟಿಷರ ದಾಸ್ಯದಿಂದ ದೇಶವನ್ನು ಬಿಡುಗಡೆಗೊಳಿಸಿದ ಬಳಿಕ ಸ್ವಾತಂತ್ರ್ಯ ನಂತರ ಪ್ರಥಮ ಪ್ರಧಾನಿಯಾಗಿ ನೆಹರು ಅವರು ಆಯ್ಕೆಯಾಗಿ, ದೇಶವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದರು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್ ಮಾತನಾಡಿ ಬ್ರಿಟಿಷರು ನೂರಾರು ವರ್ಷಗಳ ಕಾಲ ಭಾರತದ ಆಳ್ವಿಕೆ ಮಾಡಿ, ಸಂಪತ್ತು ದೋಚಿ ಹೋಗಿದ್ದರು. ಇಂಥ ಸಂಕಷ್ಟದ ಸಮಯದಲ್ಲಿ ಬಡತನದಿಂದ ಕೂಡಿದ್ದ ದೇಶವನ್ನು ಮುನ್ನಡೆಯುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದವರು ನೆಹರು ಬಡತನ ನಿರ್ಮೂಲನೆ ಹಾಗೂ ದೇಶದ ಅಖಂಡತೆ, ಭದ್ರತೆಗಾಗಿ ಅವರು ಜಾರಿ ಮಾಡಿದ, ಪಂಚ ವಾರ್ಷಿಕ ಯೋಜನೆ, ವಿದೇಶಾಂಗ ನೀತಿಗಳು ಭಾರತವನ್ನು ಅಭಿವೃದ್ದಿಯ ಹಾದಿಗೆ ತಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೈಯದ್ ಅಪ್ಸರ್ ಮಾತನಾಡಿ ನೆಹರು ಅವರಿಗೆ ಮಕ್ಕಳು ಎಂದರೆ ಪ್ರೀತಿ. ಹಾಗಾಗಿ, ಅವರ ಜನ್ಮ ದಿನವಾದ ನವೆಂಬರ್ ೧೪ ಅನ್ನು ಮಕ್ಕಳ ದಿನಾಚರಣೆಯನ್ನಾಗಿ ರಾಷ್ಟ್ರದಾದ್ಯಂತ ಆಚರಣೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ರಾಜ್ಯ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಒಬಿಸಿ ಮಂಜುನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಭರತ್ ಕೃಷ್ಣದೇವರಾಯ, ಮುಖಂಡರಾದ ವೆಂಕಟಪತಿಯಪ್ಪ, ಚಂದ್ರಮೌಳಿ, ವಿಜಯನಗರ ಮಂಜುನಾಥ್, ಚಿನ್ನಾಪುರ ನಾರಾಯಣಸ್ವಾಮಿ, ಬಾಬು, ರಫೀ, ಮಂಗಳ, ಮಡಿವಾಳ ಬೈರೇಗೌಡ, ಮಣಿ, ಷಪೀ, ಮುಂತಾದವರು ಇದ್ದರು.

ಚಿತ್ರ : ಮಾಜಿ ಪ್ರಧಾನಿ ಜವಾಹಲ್ ಲಾಲ್ ನೆಹರು ಅವರ ಜಯಂತಿಯನ್ನು ಕೋಲಾರ ಜಿಲ್ಲಾ ಕಾಂಗ್ರೆಸ್ ಘಟಕದ ಕಚೇರಿಯಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande