
ಗದಗ, 14 ನವೆಂಬರ್ (ಹಿ.ಸ.) :
ಆ್ಯಂಕರ್ : ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರಲ್ಲಿ ಮಧುಮೇಹ ಮತ್ತು ಅಧಿಕರಕ್ತದೊತ್ತಡ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಉಲ್ಬಣಗೊಂಡು ಜನರು ಆರೋಗ್ಯ ಹಧಗೆಡುತ್ತಿರುವುದರಿಂದ 30 ವರ್ಷ ಮೇಲ್ಪಟ್ಟಂತ ಎಲ್ಲರೂ ಟೈಪ್ 2 ತಡೆಗಟ್ಟಮಬಹುದು ಆದರೆ ಟೈಪ್1 ಮಧುಮೇಹವನ್ನು ತಡೆಗಟ್ಟಲು ಸಾಧ್ಯವಿಲ್ಲ ಆದರೆ ಇನ್ಸೂಲಿನ ನಿರ್ವಹಣೆ ಮಾಡಬಹುದು ಆದ್ದರಿಂದ ಪ್ರತಿಯೋಬ್ಬರು ತಮ್ಮ ಜೀವನಶೈಲಿಯನ್ನು ಬದಲಾಣೆ ಮಾಡಿಕೊಳ್ಳುವುದು ಮತ್ತು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುರಿಂದ ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ತಡೆಗಟ್ಟಲು ಸಾಧ್ಯ ಎಂದು ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾರಾದ ಡಾ.ಶರ್ಮಿಳಾ ಹೇಳಿದರು
ಕರ್ನಾಟಕ ಸರ್ಕಾರ ಜಿಲ್ಲಾಢಳಿತ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆ.ಹೆಚ್.ಪಾಟೀಲ್ ವೈಧ್ಯಕೀಯ ವಿಜ್ಞಾನ ಸಂಸ್ಥೆ ಜಿಮ್ಸ್ ಗದಗ, ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸರ್ಕಾರವು ಎನ್.ಸಿ.ಡಿ ಕಾರ್ಯಕ್ರಮಗಳ ಮೂಲಕ ಮಧುಮೇಹ, ಅಧಿಕರಕ್ತದೊತ್ತಡ ಕ್ಯಾನ್ಸರ್ ಪಾಶ್ರ್ಚವಾಯು ಮುಂತಾದ ರೋಗವನ್ನು ಪರೀಕ್ಷೆ ಮಾಡಲಾಗುತ್ತಿದ್ದು ಮತ್ತು ಮಧುಮೇಹಿಗಳು ಸಕ್ಕರೆ, ಕರೀದ ಪದಾರ್ಥಗಳನ್ನು ಸೇವಿಸಲೇಭಾರದು, ಪ್ರತಿ ತಿಂಗಳು ತಮ್ಮ ಆರೋಗ್ಯ ತಪಾಸಂಣೆಯನ್ನು ತಪ್ಪದೆ ಮಾಡಿಸಿಕೊಳ್ಳಬೇಕು, ವ್ಯಾಯಾಮ,ವಾಕಿಂಗ್ ಮೂಲಕ ಮಧುಮೇಹ ಮತ್ತು ಅಧಿಕರಕ್ತದೊತ್ತಡವನ್ನು ನಿಯಂತ್ರಣ ಮಾಡಿಕೊಳ್ಳಬೇಕು ಎಂದು ಹೇಳಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಪ್ಪ ಎನ್ ಲಿಂಗದಾಳ ಮಾತನಾಡಿ ಎನ್.ಸಿ ಡಿ ಕಾರ್ಯಕ್ರಮದ ಅಧಿಕರಕ್ತದೊತ್ತಡ ನಿಯಂತ್ರಣಕ್ಕೆ ಉಚಿತ ಆರೋಗ್ಯ ತಪಾಸಣೆ ಮತ್ತು ವೈದ್ಯಕಿಯ ಔಷದೋಪಚಾರ ಗೃಹ ಆರೋಗ್ಯ ಯೋಜನೆಯ ಮೂಲಕ ಮಾಡಲಾಗುತ್ತಿದ್ದ ಸದುಪಯೋಗವನ್ನು ಪಡೆಯಬೇಕು, ತಂಬಾಕು ಗುಟಕಾ ಮದ್ಯಸೇವೆ ಆರೋಗ್ಯಕ್ಕೆ ಹಾನಿಕರವಾಗಿದ್ದು ಅವುಗಳಿಂದ ದೂರವಿರಿ ಮತ್ತು ಪೌಷ್ಠಿಕ ಆಹಾರಗಳ ಸೇವನೆ ಯೋಗ ವ್ಯಾಯಾಮ ದಿನನಿತ್ಯದ ನಿಮ್ಮ ಜೀವನದಲ್ಲಿ ರೂಡಿಸಿಕೊಂಡು ಆರೋಗ್ಯ ಸಂಪತ್ತನ್ನು ಪಡೆಯಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮಧುಮೇಹ ನಿಯಂತ್ರಣ ಕುರಿತು ಉಪನ್ಯಾಸವನ್ನು ಡಾ.ಶ್ರಾವಣಿ, ಡಾ.ಸಿದ್ದಾರ್ಥಡಾ.ಶ್ರೀಕಾಂತ ನೀಡಿದರು. ಅಧ್ಯಕ್ಷತೆಯನ್ನು ಡಾ.ವರ್ಷಾ ಬ್ಯಾಲಿಹಾಳ ವಹಿಸಿದ್ದರು
ಪ್ರಾಸ್ಥಾವಿಕವಾಗಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಾಯ್ ಎನ್ ಕಡೇಮನಿ ಮಾತನಾಡಿದರು ಕಾರ್ಯಕ್ರಮದಲ್ಲಿ ಪ್ರಯೋಗಶಾಲಾ ತಂತ್ರಜ್ಞರಾದ ವಂದನಾ ಠಾಕೂರ ಶುಶ್ರೂಷಣಾಧಿಕಾರಿ ಆರೀಪಾ ಕಿರಟಗೇರಿ ನೇತ್ರಾಧಿಕಾರಿ ಕೋಡೆಕಲ್ಲ್ ಸಂಗೀತಾ ಕುಲಕರ್ಣಿ ಶಶಿಕಲಾ ಹಡಪದ ಪಾರ್ವತಿ ವಜ್ರಮಟ್ಟಿ ಸವಿತಾ ಬಣವಿ ಸಲ್ಮಾ ಕುಕನೂರ ಸೇರಿದಂತೆ ಗ್ರಾಮದ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP