ಉಕ್ರೇನ್ ರಾಜಧಾನಿ ಕೈವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ
ಕೈವ್, 14 ನವೆಂಬರ್ (ಹಿ.ಸ.) : ಆ್ಯಂಕರ್ : ಉಕ್ರೇನ್ ರಾಜಧಾನಿ ಕೈವ್ ಮೇಲೆ ರಷ್ಯಾ ಮಧ್ಯರಾತ್ರಿ ಬೃಹತ್ ವೈಮಾನಿಕ ದಾಳಿ ನಡೆಸಿದ್ದು, ನಗರದಲ್ಲಿ ಅನೇಕ ಸ್ಫೋಟಗಳು ಸಂಭವಿಸಿವೆ. ದಾಳಿಯಲ್ಲಿ ಕನಿಷ್ಠ 11 ಬಹುಮಹಡಿ ಕಟ್ಟಡಗಳು ಹಾನಿಗೊಂಡಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ಕೈವ್‌ ಮೇಯರ್ ವಿಟಾಲಿ ಕ್ಲ
ಉಕ್ರೇನ್ ರಾಜಧಾನಿ ಕೈವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ


ಕೈವ್, 14 ನವೆಂಬರ್ (ಹಿ.ಸ.) :

ಆ್ಯಂಕರ್ : ಉಕ್ರೇನ್ ರಾಜಧಾನಿ ಕೈವ್ ಮೇಲೆ ರಷ್ಯಾ ಮಧ್ಯರಾತ್ರಿ ಬೃಹತ್ ವೈಮಾನಿಕ ದಾಳಿ ನಡೆಸಿದ್ದು, ನಗರದಲ್ಲಿ ಅನೇಕ ಸ್ಫೋಟಗಳು ಸಂಭವಿಸಿವೆ. ದಾಳಿಯಲ್ಲಿ ಕನಿಷ್ಠ 11 ಬಹುಮಹಡಿ ಕಟ್ಟಡಗಳು ಹಾನಿಗೊಂಡಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ಕೈವ್‌ ಮೇಯರ್ ವಿಟಾಲಿ ಕ್ಲಿಟ್ಸ್ಕೊ ತಿಳಿಸಿದ್ದಾರೆ.

ರಾತ್ರಿ 12.45 ರಿಂದ 1.30ರ ನಡುವೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಯ ಸ್ಫೋಟ ಶಬ್ದಗಳು ಕೇಳಿಬಂದಿದ್ದು, ವಸತಿ ಪ್ರದೇಶಗಳು ನೇರ ಗುರಿಯಾಗಿವೆ. ಕೈವ್ ಮಿಲಿಟರಿ ಆಡಳಿತ ಮುಖ್ಯಸ್ಥ ತೈಮೂರ್ ಟ್ಕಾಚೆಂಕೊ ಅವರು “ರಷ್ಯನ್ನರು ವಸತಿ ಕಟ್ಟಡಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಎತ್ತರ ಕಟ್ಟಡಗಳು ಹಾನಿಗೊಂಡಿವೆ” ಎಂದು ತಿಳಿಸಿದ್ದಾರೆ.

ಹೊಲೊಸಿವ್ಸ್ಕಿ ಹಾಗೂ ಶೆವ್ಚೆಂಕಿವ್ಸ್ಕಿ ಜಿಲ್ಲೆಗಳ ವೈದ್ಯಕೀಯ ಮತ್ತು ಆಡಳಿತ ಕಟ್ಟಡಗಳು ಕೂಡ ಹಾನಿಗೊಂಡಿವೆ. ದಾಳಿಯ ಪರಿಣಾಮವಾಗಿ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. “ವಿದ್ಯುತ್ ಮೂಲಸೌಕರ್ಯಕ್ಕೆ ಹಾನಿಯಾಗಿದೆ,” ಎಂದು ಮೇಯರ್ ಕ್ಲಿಟ್ಸ್ಕೊ ಹೇಳಿದ್ದಾರೆ.

ಗಾಯಗೊಂಡ 12 ಮಂದಿಯಲ್ಲಿ ಐವರು, ಗರ್ಭಿಣಿ ಮಹಿಳೆಯನ್ನು ಸೇರಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಾರ್ನಿಟ್ಸ್ಕಿ ಜಿಲ್ಲೆಯಲ್ಲಿ ದಾಳಿಯ ಹೊತ್ತಿನಲ್ಲಿ ಹಲವಾರು ಕಾರುಗಳು ಬೆಂಕಿಗೆ ತುತ್ತಾಗಿವೆ.

ಕೈವ್ ಹೊರವಲಯದ ಬಿಲಾ ತ್ಸೆರ್ಕ್ವಾ ಪ್ರದೇಶವೂ ದಾಳಿಗೆ ಗುರಿಯಾಗಿದ್ದು, 55 ವರ್ಷದ ವ್ಯಕ್ತಿ ಗಂಭೀರ ಸುಟ್ಟ ಗಾಯ ಹೊಂದಿದ್ದಾರೆ ಎಂದು ಕೈವ್‌ ಒಬ್ಲಾಸ್ಟ್ ಗವರ್ನರ್ ಮೈಕೋಲಾ ಕಲಾಶ್ನಿಕ್ ತಿಳಿಸಿದ್ದಾರೆ.

ನಗರದ ವೈಮಾನಿಕ ರಕ್ಷಣಾ ಪಡೆಗಳನ್ನು ತಕ್ಷಣ ಸಕ್ರಿಯಗೊಳಿಸಲಾಗಿದ್ದು, ದೇಶದಾದ್ಯಂತ ವಾಯುದಾಳಿ ಎಚ್ಚರಿಕೆ ನೀಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande