
ವಿಜಯಪುರ, 14 ನವೆಂಬರ್ (ಹಿ.ಸ.) :
ಆ್ಯಂಕರ್ : ರೈತರು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಶಾಂತಿಯುತವಾಗಿ ಹೋರಾಟ ಮಾಡಬೇಕು ಎಂದು ರೈತ ಹೋರಾಟಗಾರ ಚೂನಪ್ಪ ಪೂಜಾರಿ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಮುಧೋಳದಲ್ಲಿ ಕಬ್ಬು ಬೆಳೆಗಾರರ ಹೋರಾಟದಲ್ಲಿ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ಹಿಂಸಾಚಾರದ ಹೋರಾಟದಿಂದ ರೈತರಿಗೆ ಹಾನಿಯಾಗುತ್ತದೆ. ರೈತರಿಗೆ ಹಾನಿಯಾಗಿದೆ, ಸರ್ಕಾರ ಇದನ್ನ ಭರಿಸಬೇಕು. ಗುರ್ಲಾಪುರದಲ್ಲಿ ನಾವು ಶಾಂತವಾಗಿ ಹೋರಾಟ ಮಾಡಿದ್ದೇವೆ. ಲಕ್ಷಾಂತರ ರೈತರು ಸೇರಿದರು ಸಹ ಒಂದೇ ಒಂದು ಗಲಾಟೆ ಮಾಡಿಲ್ಲ. ಮುಧೋಳ ತಾಲೂಕಿನಲ್ಲಿ ನಡೆದ ಗಲಾಟೆ ಸರಿಯಲ್ಲ. ಕೃತ್ಯದ ಹಿಂದೆ ಯಾರಿದ್ದಾರೆ ಗೊತ್ತಿಲ್ಲ. ಆದರೆ ರೈತರಿಗೆ ಹಾನಿಯಾಗಿದೆ. ನಾವೇ ಕಬ್ಬು ಬೆಳೆದು ಅದಕ್ಕೆ ಬೆಂಕಿ ಬಿದ್ದರೆ ನಮಗೇ ನೋವಾಗುತ್ತದೆ. ಸಾಲ ಮಾಡಿ ತಗೊಂಡಿರುವ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದರೆ ಅದಕ್ಕೆ ಯಾವು ಹೊಣೆ. ಕೆಲವು ಸಕ್ಕರೆ ಕಾರ್ಖಾನೆಗಳು 3300 ಕೊಡಲು ಹಿಂದೇಟು ಹಾಕುತ್ತವೆ. ಸರ್ಕಾರ ಇದನ್ನು ಬಗೆಹರಿಸಬೇಕು. ರೈತರ ಹೋರಾಟ ಶಾಂತಿಯುತವಾಗಿರಲಿ. ಕಬ್ಬು ಬೆಳೆಗಾರರ ಸಮಸ್ಯೆಗೆ ಸಕ್ಕರೆ ಇಲಾಖೆ ಅಧಿಕಾರಿಗಳು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಕ್ಕರೆ ಕಾರ್ಖಾನೆಗಳ ಪೂರ್ಣ ಹಣ ನೀಡಿದ್ದರೆ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande