ಮಕ್ಕಳ ಕ್ರೀಡಾಸಕ್ತಿಗೆ ಪಾಲಕರು ಪ್ರೋತ್ಸಾಹಿಸಬೇಕು : ರವಿ ಬೋಸರಾಜು
ರಾಯಚೂರು, 14 ನವೆಂಬರ್ (ಹಿ.ಸ.) : ಆ್ಯಂಕರ್ : ಕ್ರೀಡೆಗಳಿಂದ ಮಕ್ಕಳಲ್ಲಿ ಆರೋಗ್ಯ, ದೈಹಿಕ ಹಾಗೂ ಮಾನಸಿಕ ಜ್ಞಾನ ವೃದ್ಧಿಯಾಗಲಿದೆ. ರಾಜ್ಯ ಮಟ್ಟದ ಕ್ರೀಡಾಕೂಟ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಇಂತಹ ಕ್ರೀಡಾಕೂಟಗಳ ಮೂಲಕ ನಮ್ಮ ಜಿಲ್ಲ
ಮಕ್ಕಳ ಕ್ರೀಡಾಸಕ್ತಿಗೆ ಪಾಲಕರು ಪ್ರೋತ್ಸಾಹಿಸಬೇಕು- ರವಿ ಬೋಸರಾಜು


ರಾಯಚೂರು, 14 ನವೆಂಬರ್ (ಹಿ.ಸ.) :

ಆ್ಯಂಕರ್ : ಕ್ರೀಡೆಗಳಿಂದ ಮಕ್ಕಳಲ್ಲಿ ಆರೋಗ್ಯ, ದೈಹಿಕ ಹಾಗೂ ಮಾನಸಿಕ ಜ್ಞಾನ ವೃದ್ಧಿಯಾಗಲಿದೆ. ರಾಜ್ಯ ಮಟ್ಟದ ಕ್ರೀಡಾಕೂಟ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಇಂತಹ ಕ್ರೀಡಾಕೂಟಗಳ ಮೂಲಕ ನಮ್ಮ ಜಿಲ್ಲೆಯಲ್ಲಿರುವ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಬೆಳೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ತಿಳಿಸಿದ್ದಾರೆ.

ವಿಕ್ಟೋರಿ ಬ್ಯಾಡ್ಮಿಂಟನ್ ಅಕ್ಯಾಡಮಿ ಹಾಗೂ ಎನ್ಎಸ್ ಬೋಸರಾಜು ಫೌಂಡೇಷನ್ ಸಹಯೋಗದೊಂದಿಗೆ ಯುನೆಕ್ಸ್ ಸನ್ ರೈಸ್ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಟೂರ್ನಮೆಂಟ್‌ ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನ ನೀಡಿ ಮಾತನಾಡಿದರು.

ಪಾಲಕರು ಮಕ್ಕಳಿಂದ ಮೊಬೈಲ್ ದೂರವಿರಿಸಿ ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ತುಂಬುವ ಕೆಲಸ ಮಾಡಬೇಕು. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಿಗಲಿದೆ.

ರಾಜ್ಯದ ಜಿಲ್ಲೆಗಳಿಂದ 500 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದ ನೋಡಿದರೆ ಯುವಕರಲ್ಲಿ ಕ್ರೀಡಾ ಉತ್ಸಾಹ ಕಂಡು ಬರುತ್ತದೆ ಎಂದರು.

ಈ ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ರಾಜ್ಯ ಯುವ ಕಾಂಗ್ರೆಸ್‌ ನಾಯಕ ರವಿ ಬೋಸರಾಜು ಅವರು ಭಾಗವಹಿಸಿ ವಿಜೇತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಉಪ ಮಹಾಪೌರರಾದ ಸಾಜಿದ್, ಸಮೀರ್, ಕಾಂಗ್ರೆಸ್ ಮುಖಂಡರಾದ ಕೆ. ಶಾಂತಪ್ಪ, ಸಾವಿತ್ರಿ ಪುರುಷೋತ್ತಮ್, ಬಿ. ರಮೇಶ್, ತಿಮ್ಮಾ ರೆಡ್ಡಿ, ವಿಕ್ಟೋರಿ ಬ್ಯಾಡ್ಮಿಂಟನ್ ಅಕಾಡಮಿ ಉಸ್ತುವಾರಿಯಾದ ಅರವಿಂದ್, ಕಿರಣ್ ಬೆಲ್ಲಂ, ಯುವ ಮುಖಂಡರಾದ ಸುಮನ್, ವಿಶ್ವೇಶ್ವರ ರಾವ್, ನರೇಶ, ಹಾಗೂ ಅನೇಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande