
ನವದೆಹಲಿ, 14 ನವೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 15ರಂದು ಗುಜರಾತ್‌ನ ಸೂರತ್ ಬುಲೆಟ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಮುಂಬೈ–ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ.
ಯೋಜನೆಯ 85% ಕೆಲಸ ಪೂರ್ಣವಾಗಿದ್ದು, ಇದರಲ್ಲಿ 465 ಕಿಮೀ ಒಂದೇ ಹಳಿಯಲ್ಲಿ ನಿರ್ಮಾಣವಾಗುತ್ತಿದೆ. ಈವರೆಗೆ 326 ಕಿಮೀ ನಿರ್ಮಾಣ ಹಾಗೂ 25 ನದಿ ಸೇತುವೆಗಳಲ್ಲಿ 17 ಪೂರ್ಣಗೊಂಡಿವೆ.
ಬುಲೆಟ್ ರೈಲು ಚಾಲನೆಯಾದ ಬಳಿಕ ಮುಂಬೈ–ಅಹಮದಾಬಾದ್ ನಡುವಿನ ಪ್ರಯಾಣ ಸಮಯ 2 ಗಂಟೆಗೆ ಇಳಿಯಲಿದೆ. 508 ಕಿಮೀ ಉದ್ದದ ಕಾರಿಡಾರ್ ಸೂರತ್, ವಡೋದರಾ, ಥಾಣೆ, ಬಿಲಿಮೋರಾ, ವಾಪಿ ಸೇರಿದಂತೆ 12 ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ.
47 ಕಿಮೀ ಉದ್ದದ ಸೂರತ್–ಬಿಲಿಮೋರಾ ವಿಭಾಗದಲ್ಲಿ ಸಿವಿಲ್ ಹಾಗೂ ಹಳಿ ಹಾಕುವ ಕೆಲಸ ಪೂರ್ಣಗೊಂಡಿದೆ. ವಜ್ರ ಉದ್ಯಮದ ಪ್ರೇರಣೆಯಿಂದ ಸೂರತ್ ನಿಲ್ದಾಣವನ್ನು ಆಧುನಿಕ ಸೌಲಭ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa