
ಕೊಪ್ಪಳ, 14 ನವೆಂಬರ್ (ಹಿ.ಸ.) :
ಆ್ಯಂಕರ್ : ಜೆಸ್ಕಾಂ, ಮುನಿರಾಬಾದ್ ಉಪ ವಿಭಾಗ ಕಚೇರಿ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವ ಹಿನ್ನೆಲೆಯಲ್ಲಿ ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ನವೆಂಬರ್ 15 ರಂದು ಬೆಳಿಗ್ಗೆ 11 ಗಂಟೆಗೆ ಮುನಿರಾಬಾದ್ ಜೆಸ್ಕಾಂ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದೆ.
ಸರ್ಕಾರದ ಆದೇಶದನ್ವಯ ಹಾಗೂ ಮೇಲಾಧಿಕಾರಿಗಳ ನಿರ್ದೇಶನದನ್ವಯ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಹಿನ್ನೆಲೆಯಲ್ಲಿ ಪ್ರತಿ ತಿಂಗಳಿನ 3ನೇ ಶನಿವಾರದಂದು ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರಂತೆ ನವೆಂಬರ್ 15ಕ್ಕೆ ಮುನಿರಾಬಾದ್ ಜೆಸ್ಕಾಂ ಉಪ ವಿಭಾಗದ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯತಿಗಳಾದ ಮುನಿರಾಬಾದ್, ಹುಲಿಗಿ, ಹಿಟ್ನಾಳ, ಅಗಳಕೇರಾ, ಶಿವಪುರ, ಗಿಣಿಗೇರಾ, ಹಿರೇಬಗನಾಳ, ಕುಣಿಕೇರಾ, ಕಲ್‍ತಾವರಗೇರಾ, ಬಂಡಿಹರ್ಲಾಪುರ, ಬೂದುಗುಂಪಾ, ಗುಳದಳ್ಳಿ, ಬೇವಿನಹಳ್ಳಿ, ಇಂದರಗಿ, ಹೊಸಳ್ಳಿ ಹಾಗೂ ವನಬಳ್ಳಾರಿ ಗ್ರಾಮ ಪಂಚಾಯತಿಗಳ ಎಲ್ಲಾ ವಿದ್ಯುತ್ ಗ್ರಾಹಕರು ಮತ್ತು ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಡ್ಡಾಯವಾಗಿ ಈ ಸಭೆಗೆ ಹಾಜರಾಗಿ, ಯಶಸ್ವಿಗೊಳಿಸಬೇಕು ಎಂದು ಜೆಸ್ಕಾಂ ಮುನಿರಾಬಾದ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್