

ರಾಯಚೂರು, 14 ನವೆಂಬರ್ (ಹಿ.ಸ.) :
ಆ್ಯಂಕರ್ : ಇತಿಹಾಸ ಪುರಾತತ್ವ ಮತ್ತು ಸಂಸ್ಕೃತಿ ಸಂಶೋಧನೆಯಲ್ಲಿ ತೊಡಗಿರುವವರಿಗೆ ಕರ್ನಾಟಕ ಇತಿಹಾಸ ಅಕಾಡೆಮಿ 2025 ರ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಡಾ.ಪದ್ಮಜಾ ದೇಸಾಯಿ ಅವರಿಗೆ ನವೆಂಬರ್ 8,9,10 ರಂದು ಗದುಗಿನ ಮಹಾತ್ಮ ಗಾಂಧೀ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ವಿಶ್ವವಿದ್ಯಾಲಯ ಮತ್ತು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ನಡೆದ 39 ನೆಯ ವಾರ್ಷಿಕ ಸಮ್ಮೇಳನದಲ್ಲಿ ಪ್ರಸಕ್ತ ಸಾಲಿನ ‘ಕೊಪ್ಪಳದ ಬಿ.ಸಿ.ಪಾಟೀಲ್ ಟ್ರಸ್ಟ್ ಅವರ ಶ್ರೀಮತಿ ಸುಮಂಗಲ ಪಾಟೀಲ ಮಹಿಳಾ ಪ್ರಶಸ್ತಿ’ ಪ್ರದಾನ ಘೋಷಿಸಿ ಸನ್ಮಾನಿಸಿ ಗೌರವಿಸಿದೆ.
ಸತತ ಕಳೆದ ಹತ್ತು ವರ್ಷಗಳಿಂದ ರಾಯಚೂರು ಮತ್ತು ವಿಜಯನಗರ ಜಿಲ್ಲೆಯಲ್ಲಿರುವ ಹಂಪಿ ಪ್ರದೇಶದ ಚರಿತ್ರೆ, ಸಂಶೋಧನೆ, ಅಧ್ಯಯನ ಮತ್ತು ಪ್ರಕಟಣೆಯಲ್ಲಿ ತೊಡಗಿದ್ದಾರೆ. ರಾಯಚೂರು ಪಕ್ಕದ ಕೃಷ್ಣಾ ನದಿ ಪಾತ್ರದಲ್ಲಿ ದೊರೆತ ವಿಷ್ಣು ಮತ್ತು ಶಿವಲಿಂಗಗಳ ಬಗ್ಗೆ ವಿವರಣೆಯನ್ನು ಮಾಧ್ಯಮದಲ್ಲಿ ನೀಡಿದ್ದಾರೆ. ಕರ್ನಾಟಕ ಇತಿಹಾಸ ಅಕಾದೆಮಿಯ ಪ್ರತಿಷ್ಠಿತ ಸಂಶೋಧನಾ ಮಹಿಳಾ ಪ್ರಶಸ್ತಿಯು 10 ಸಾವಿರ ಮೊತ್ತದ ನಗದು, ಫಲಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್