
ರಾಯಚೂರು, 14 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆಯಿಂದ ವಿನಾಯತಿ ನೀಡಲಾದ ಸ್ವತ್ತುಗಳಿಗೆ ಶೇ.25 ರಷ್ಟು ಸೇವಾ ಶುಲ್ಕದ ವಸೂಲಾತಿಗೆ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯವು ಆ.ಸಂ: 29690 ಡಿಎಂಎ 72 ಡಿಇಬಿಟಿ 2019-20ರ ದಿ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಶನ್ (ಅಮೆಂಡಮೆಂಟ್) ರೂಲ್ಸ, 2003 ಕಾಲಂ.3, ಇನ್ಸರ್ಟೇಶನ್ ಆಫ್ ನ್ಯೂ ರೂಲ್ಸ್ 7-ಎ. ಆಫ್ಟರ್ ರೂಲ್ 7 ಆಫ್ ಶೆಡ್ಯೂಲ್ 3 (ಟ್ಯಾಕ್ಷೇಶನ್ ರೂಲ್ಸ) ಟು ದಿ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಶನ್ ಆಕ್ಟ್, 1976 ಸೆಕ್ಷನ್.110 (2)ರ ಪ್ರಕಾರ ತಿಳಿಸಿರುತ್ತದೆ.
ಸರ್ಕಾರಿ ಅಥವಾ ಧಾರ್ಮಿಕ ಸಂಸ್ಥೆಗಳು, ಚಾರಿಟೇಬಲ್ (ದಾನಶೀಲ) ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಅಥವಾ ಆಸ್ಪತ್ರೆಗಳು, ಬೇರೆ ಯಾವುದೇ ತೆರಿಗೆ ವಿನಾಯತಿ ಪಡೆದ ಕಟ್ಟಡಗಳು, ಇನ್ನಿತರೆ ಕಟ್ಟಡಗಳಿಗೆ ಆಸ್ತಿ ತೆರಿಗೆಯಿಂದ ವಿನಾಯಿತಿಗೊಂಡು ಕಟ್ಟಡಗಳ ಮೇಲೆ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್