ಪಂಜಾಬ್ ಗಡಿಯಲ್ಲಿ ಪಾಕಿಸ್ತಾನದ 3 ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್
ಚಂಡೀಗಡ, 14 ನವೆಂಬರ್ (ಹಿ.ಸ.) : ಆ್ಯಂಕರ್ : ಪಂಜಾಬ್‌ನ ಭಾರತ–ಪಾಕ್ ಗಡಿಯಲ್ಲಿ ಬಿಎಸ್‌ಎಫ್ ಸಿಬ್ಬಂದಿ ಮೂರು ಪಾಕಿಸ್ತಾನಿ ಡ್ರೋನ್‌ಗಳನ್ನು ತಟಸ್ಥಗೊಳಿಸಿ, ಕಳ್ಳಸಾಗಣೆಗಾಗಿ ತಂದುಹಾಕಲಾಗಿದ್ದ 558 ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಮೃತಸರ, ಫಿರೋಜ್‌ಪುರ ಮತ್ತು ತರಣ್ ತರಣ್ ಜಿಲ್ಲೆಗ
Drone


ಚಂಡೀಗಡ, 14 ನವೆಂಬರ್ (ಹಿ.ಸ.) :

ಆ್ಯಂಕರ್ : ಪಂಜಾಬ್‌ನ ಭಾರತ–ಪಾಕ್ ಗಡಿಯಲ್ಲಿ ಬಿಎಸ್‌ಎಫ್ ಸಿಬ್ಬಂದಿ ಮೂರು ಪಾಕಿಸ್ತಾನಿ ಡ್ರೋನ್‌ಗಳನ್ನು ತಟಸ್ಥಗೊಳಿಸಿ, ಕಳ್ಳಸಾಗಣೆಗಾಗಿ ತಂದುಹಾಕಲಾಗಿದ್ದ 558 ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ.

ಅಮೃತಸರ, ಫಿರೋಜ್‌ಪುರ ಮತ್ತು ತರಣ್ ತರಣ್ ಜಿಲ್ಲೆಗಳಲ್ಲಿ ನಡೆದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.

ಅಮೃತಸರದಲ್ಲಿ DJI ಮಾವಿಕ್ 3 ಕ್ಲಾಸಿಕ್ ಡ್ರೋನ್‌ನ್ನು ಗಡಿಯಲ್ಲೇ ಪತ್ತೆಹಚ್ಚಿ ನೆಲಕ್ಕುರುಳಿಸಲಾಯಿತು. ಫಿರೋಜ್‌ಪುರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡ್ರೋನ್ ಜೊತೆಗೆ ಹೆರಾಯಿನ್ ಪ್ಯಾಕೆಟ್ ಪತ್ತೆಯಾಯಿತು. ತರಣ್ ತರಣ್ ಜಿಲ್ಲೆಯ ಮೆಹ್ದೀಪುರದಲ್ಲಿ ರಾತ್ರಿ ವೇಳೆ ಕಾಣಿಸಿಕೊಂಡ ಮೂರನೇ ಡ್ರೋನ್‌ನ್ನು ಸಹ ಬಿಎಸ್‌ಎಫ್ ಗುಂಡಿನ ದಾಳಿಯಿಂದ ನಿಷ್ಕ್ರಿಯಗೊಳಿಸಿದೆ.

ಪಾಕಿಸ್ತಾನ ಮೂಲದ ಡ್ರೋನ್ ಕಳ್ಳಸಾಗಣೆಗೆ ಇದು ಮತ್ತೊಂದು ದೊಡ್ಡ ಹೊಡೆತವಾಗಿದೆ ಎಂದು ಬಿಎಸ್‌ಎಫ್ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande