ಕೊಪ್ಪಳ : ವಿಜಯನಗರ ಜಿಲ್ಲೆ ರಾಜಪುರ ಗ್ರಾಮದ ಬಾಲಕ ಕಾಣೆ
ಕೊಪ್ಪಳ, 14 ನವೆಂಬರ್ (ಹಿ.ಸ.) : ಆ್ಯಂಕರ್ : ವಿಜಯನಗರ ಜಿಲ್ಲೆಯ ರಾಜಪುರ ಗ್ರಾಮದ ಹಾಗೂ ಹಾಲಿ ಕೊಪ್ಪಳ ನಗರದ ಗವಿಮಠದ ಹಾಸ್ಟೆಲ್‍ನಲ್ಲಿ ವಾಸವಿದ್ದು ಗವಿಮಠದಲ್ಲಿ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಭರತ ತಂ. ಅನ್ವರಿ ಕಣಮೇಶ(15) ಅಕ್ಟೋಬರ್ 28 ರ ಮಧಾಹ್ನ 2 ಗಂಟೆಯಿಂದ ಕಾಣೆಯಾಗಿದ್ದು, ಈವರೆಗೂ
ಕೊಪ್ಪಳ : ವಿಜಯನಗರ ಜಿಲ್ಲೆಯ ರಾಜಪುರ ಗ್ರಾಮದ  ಬಾಲಕ ಕಾಣೆ


ಕೊಪ್ಪಳ, 14 ನವೆಂಬರ್ (ಹಿ.ಸ.) :

ಆ್ಯಂಕರ್ : ವಿಜಯನಗರ ಜಿಲ್ಲೆಯ ರಾಜಪುರ ಗ್ರಾಮದ ಹಾಗೂ ಹಾಲಿ ಕೊಪ್ಪಳ ನಗರದ ಗವಿಮಠದ ಹಾಸ್ಟೆಲ್‍ನಲ್ಲಿ ವಾಸವಿದ್ದು ಗವಿಮಠದಲ್ಲಿ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಭರತ ತಂ. ಅನ್ವರಿ ಕಣಮೇಶ(15) ಅಕ್ಟೋಬರ್ 28 ರ ಮಧಾಹ್ನ 2 ಗಂಟೆಯಿಂದ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಪೋಷಕರು ಬಾಲಕನನ್ನು ಯಾರೋ ಅಪಹರಣ ಮಾಡಿದ್ದಾರೆ ಎಂದು ಶಂಕಿಸಿದ್ದು, ಈ ಬಗ್ಗೆ ಕೊಪ್ಪಳ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ.74/2025 ಕಲಂ 137(2) ಬಿ.ಎನ್.ಎಸ್ ನೇದ್ದರಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

ಬಾಲಕನ ಚಹರೆ ವಿವರ:

ಬಾಲಕನು 3.5 ಅಡಿ ಎತ್ತರವಿದ್ದು, ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಕಾಣೆಯಾದ ದಿನ ಬಿಳಿ ಬಣ್ಣದ ಶರ್ಟ್ ಮತ್ತು ಖಾಕಿ ಬಣ್ಣದ ಪ್ಯಾಂಟ್ ಧರಿಸಿದ್ದನು.

ಮೇಲ್ಕಂಡ ಚಹರೆಯ ಬಾಲಕನ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಮಹಿಳಾ ಪೊಲೀಸ್ ಠಾಣೆ ದೂ.ಸಂ.:08539-221233, ಮಹಿಳಾ ಠಾಣೆ ಪಿಐ: 8073476715, ತನಿಖಾಧಿಕಾರಿ ಶಶಿಕಲಾ ಮ.ಹೆಚ್.ಸಿ.138 ಮೊ.ಸಂ: 8217391502, ಕೊಪ್ಪಳ ಪೊಲೀಸ್ ಕಂಟ್ರೋಲ್ ರೂಂ.ಸಂ: 9480803700 ಇಲ್ಲಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಮಹಿಳಾ ಪೊಲೀಸ್ ಠಾಣೆ ಕೋರಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande