ನ.13ರಂದು ಬಾಳೆ ಬೆಳೆಯ ತಾಂತ್ರಿಕ ಉಪನ್ಯಾಸ
ಹೊಸಪೇಟೆ, 12 ನವೆಂಬರ್ (ಹಿ.ಸ.) ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಮುನಿರಾಬಾದ್ ಸಹಯೋಗದಲ್ಲಿ ನಗರದ ರೋಟರಿ ಕ್ಲಬ್‍ನಲ್ಲಿ ನವೆಂಬರ್.13 ರಂದು ಬೆ.10:30ಕ್ಕೆ ಬಾಳೆ ಬೆಳೆ ತಾಂತ್ರಿಕ ಉಪನ್ಯಾಸ ಹಾಗೂ ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಂವ
ನ.13ರಂದು ಬಾಳೆ ಬೆಳೆಯ ತಾಂತ್ರಿಕ ಉಪನ್ಯಾಸ


ಹೊಸಪೇಟೆ, 12 ನವೆಂಬರ್ (ಹಿ.ಸ.)

ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಮುನಿರಾಬಾದ್ ಸಹಯೋಗದಲ್ಲಿ ನಗರದ ರೋಟರಿ ಕ್ಲಬ್‍ನಲ್ಲಿ ನವೆಂಬರ್.13 ರಂದು ಬೆ.10:30ಕ್ಕೆ ಬಾಳೆ ಬೆಳೆ ತಾಂತ್ರಿಕ ಉಪನ್ಯಾಸ ಹಾಗೂ ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಹೊಸಪೇಟೆ ಮೊ.9164297220, ಮರಿಯಮ್ಮನಹಳ್ಳಿ ಮೊ.7204888978, ಕಮಲಾಪುರ ಮೊ.8123465548 ಮತ್ತು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಮೊ.8310291867 ರೈತರು ಆಯಾ ಹೋಬಳಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎಮ್.ರಮೇಶ್ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande