
ಕೋಲಾರ,೧೨ನವಂಬರ್ (ಹಿ.ಸ.)ಆಂಕರ್ : ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಮೈ-ಭಾರತ್ ಕೇಂದ್ರ ಹಾಗೂ ಜಿಲ್ಲಾಡಳಿತ, ಯುವಸಬಲೀಕರಣ & ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಶ್ರೀ ದೇವರಾಜ್ ಅರಸು ವೈದ್ಯಕಿಯ ಮಹಾವಿದ್ಯಾಲಯದ ಕೋಲಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಸರ್ದಾರ್@೧೫೦ ಏಕತಾ ಪಾದಯಾತ್ರೆಯನ್ನು ನವೆಂಬರ್ ೨೪ ರಂದು ಕೋಲಾರ ನಗರದ ಪ್ರವಾಸಿ ಮಂದಿರದ ವೃತ್ತದಿಂದ ಕ್ಲಾಕ್ ಟವರ್- ಹೊಸ ಬಸ್ ನಿಲ್ದಾಣ- ಕಾಳಮ್ಮ ಗುಡಿ ಬೀದಿ ಮುಖೇನ ಎಂ.ಜಿ. ರಸ್ತೆ ಗಾಂಧಿ ವನದ ವರೆಗೆ ಆಯೋಜಿಸಲಾಗಿದೆ ಎಂದು ಸಂಸದರಾದ ಎಂ ಮಲ್ಲೇಶ್ ಬಾಬು ಅವರು ತಿಳಿಸಿದರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ಕೋಲಾರ ಜಿಲ್ಲೆಯ ಸುಮಾರು ೫೦೦ ಕ್ಕೂ ಹೆಚ್ಚಿನ ಯುವಜನರು ಭಾಗವಹಿಸಲಿದ್ದಾರೆ ಭಾಗವಹಿಸವವರಿಗೆ ಟಿ-ಶರ್ಟ್, ಟೋಪಿ, ಪ್ರಮಾಣ ಪತ್ರ ಹಾಗೂ, ಓ.ಆರ್.ಎಸ್ ಮತ್ತು ಮಜ್ಜಿಗೆ ಮತ್ತು ಲಘುಉಪಹಾರ ವ್ಯವಸ್ಥೆ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ಯುವಜನರಲ್ಲಿ ಏಕತೆ, ದೇಶಭಕ್ತಿ ಮತ್ತು ನಾಗರಿಕ ಜವಾಬ್ದಾರಿಯ ಮನೋಭಾವವನ್ನು ಜಾಗೃತಗೊಳಿಸುವ ಗುರಿಯನ್ನು ಹೊಂದಿದೆ ಹಾಗೂ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸ್ವಚ್ಚತಾ ಶ್ರಮದಾನ. ಯೋಗ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಏಕತಾ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಒಗ್ಗಟ್ಟಿನ ಮನೋಭಾವವನ್ನು ಆಚರಿಸಿ! ಸರ್ದಾರ್ ಪಟೇಲ್ ಅವರ ಏಕತಾ ಭಾರತದ ದೃಷ್ಟಿಕೋನವನ್ನು ನಾವೆಲ್ಲರೂ ಗೌರವಿಸೋಣ. ಜಿಲ್ಲೆಯ ಎಲ್ಲಾ ಯುವಜನರು ಕಾರ್ಯಕ್ರಮದಲ್ಲಿ ಭಾಗವಹಿಸಲು ತಿಳಿಸಿದರು.
ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು,ಮೇರಾ ಯುವ ಭಾರತ (ಮೈ ಭಾರತ) ಮೂಲಕ, ವಿಕಸಿತ ಭಾರತ್ ಪಾದಯಾತ್ರೆಗಳನ್ನು ಆಯೋಜಿಸುತ್ತಿದೆ. ಈ ಉಪಕ್ರಮವು ರಾಷ್ಟ್ರೀಯ ಹೆಮ್ಮೆಯನ್ನು ಬೆಳೆಸಲು, ನಾಗರಿಕ ಸಂಬಂಧವನ್ನು ಗಾಢವಾಗಿಸಲು ಮತ್ತು ರಾಷ್ಟ್ರೀಯ ನಾಯಕರ ಸ್ಮರಣರ್ಥ ಕಾರ್ಯಕ್ರಮಗಳ ಮೂಲಕ ಯುವಕರಲ್ಲಿ ಏಕತೆಯ ಮನೋಭಾವವನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ. ಗೌರವಾನ್ವಿತ ಪ್ರಧಾನ ಮಂತ್ರಿಯವರ ರಾಷ್ಟ್ರಮಂಥನದಲ್ಲಿ ಜನ ಭಾಗೀದಾರಿ ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ. ಈ ಉಪಕ್ರಮವು ಯುವಕರಿಂದ ಹಿಡಿದು ಯೋಧರವರೆಗೆ ಪ್ರತಿಯೊಬ್ಬ ಪಾಲುದಾರರನ್ನು ಸ್ಮರಣಾರ್ಥ ಕ್ರಿಯೆಯಲ್ಲಿ ಒಟ್ಟುಗೂಡಿಸುತ್ತದೆ. ಇದು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ಬಲಪಡಿಸುತ್ತದೆ ಮತ್ತು ಭಾರತದ ರಾಷ್ಟ್ರೀಯ ನಾಯಕರ ಕೊಡುಗೆಗಳಿಗೆ ಗೌರವ ಸಲ್ಲಿಸುತ್ತದೆ ಎಂದು ತಿಳಿಸಿದರು.
ಅಕ್ಟೋಬರ್ ೬ ರಂದು ಸಚಿವಾಲಯವು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ ನೇ ಜನ್ಮ ದಿನಾಚರಣೆಯ ಮೈ ಧಾರತ ನೇತೃತ್ವದ ಭಾರತ ಸರ್ಕಾರವು ರಾಷ್ಟ್ರೀಯ ಏಕತಾ ದಿನ ಸರ್ದಾರ್ ೧೫೦ ಏಕತಾ ಪಾದಯಾತ್ರೆ ಅನ್ನು ಪ್ರಾರಂಭಿಸುವುದಾಗಿ ತಿಳಿಸಿದರು.
ಭಾರತದ ಯುವಜನರಲ್ಲಿ ಏಕತೆ, ದೇಶಭಕ್ತಿ ಮತ್ತು ನಾಗರಿಕ ಜವಾಬ್ದಾರಿಯ ಮನೋಭಾವವನ್ನು ಜಾಗೃತಗೊಳಿಸುವ ಗುರಿಯನ್ನು ಹೊಂದಿದೆ ಮತ್ತು ಛಿದ್ರಗೊಂಡ ಭಾರತವನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸಿದ ನಾಯಕನ ಪರಂಪರೆಯನ್ನು ಗೌರವಿಸುತ್ತದೆ ಎಂದು ತಿಳಿಸಿದರು.
ಈ ಅಭಿಯಾನದ ಮೂಲಕ, ಯುವಜನರು ತಮ್ಮ ದೈನಂದಿನ ಜೀವನದಲ್ಲಿ ಮತ್ತು ನಾಗರಿಕ ನಿಶ್ಚಿತಾರ್ಥದಲ್ಲಿ ಏಕ್ ಭಾರತ, ಆತ್ಮ ನಿಭ್ರ್ರ ಭಾರತದ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ ಎಂದರು.
ಈ ಅಂಗವಾಗಿ ಡಿಜಿಟಲ್ ಹಂತದ ಉದ್ಘಾಟನೆಯನ್ನು ಆಕ್ಟೋಬರ್ ೬ ರಂದು, ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಮೈ-ಭಾರತ್ ಪೋರ್ಟಲ್ನಲ್ಲಿ ಡಿಜಿಟಲ್ ಅಭಿಯಾನಕ್ಕೆ ಚಾಲನೆ ನೀಡಿಲಿದ್ದಾರೆ. ಇದರ ಮುಂದುವರೆದ ಭಾಗವಾಗಿ ೧೫-೨೯ ವರ್ಷದ ವಯೊಮಿತಿ ಹೊಂದಿರುವ ಯುವಜನರಿಗಾಗಿ ಸಾಮಾಜಿಕ ಮಾಧ್ಯಮ ರೀಲ್ ಸ್ಪರ್ಧೆ, ಪ್ರಬಂಧ ಬರೆಯುವ ಸ್ಪರ್ಧೆ ಮತ್ತು ಸರ್ದಾರ್@೧೫೦ ಯುವ ನಾಯಕರ ಕಾರ್ಯಕ್ರಮವನ್ನು ಮೈ ಭಾರತ ಪೋರ್ಟ್ ಲ್ ನಲ್ಲಿ ಆಯೋಜಿಸಲಾಗಿದೆ.೧೫೦ ವಿಜೇತರು ರಾಷ್ಟ್ರೀಯ ಪಾದಯಾತ್ರೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮೈ ಭಾರತ್ ಪೋರ್ಟ್ಲ್ ನ ಜಾಲತಾಣಕ್ಕೆ ಭೇಟಿ ನೀಡಬಹುದು ಹಾಗೂ ಮೈ-ಭಾರತ್ ಕೋಲಾರ ಜಿಲ್ಲಾ ಕಚೇರಿ ಸಂಖ್ಯೆ ೯೮೪೫೪೦೭೭೪೮ ದೂರವಾಣಿ ಕರೆ ಮಾಡಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಯುವ ಅಧಿಕಾರಿ ರಾಜೇಶ್ ಕಾರಂತ್ ಅವರು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ದೇವರಾಜು ಅರಸು ವಿದ್ಯಾಸಂಸ್ಥೆಯ ಡಾ.ಮುನಿನರಾಯಣಪ್ಪ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಸುಮಂತ್,ಕಾರ್ಯಕ್ರಮದ ನಾಮ ನಿರ್ದೇಶನ ಸದಸ್ಯರಾದ ರಾಜೇಶ್ ಸಿಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್