


ರಾಯಚೂರು , 12 ನವೆಂಬರ್ (ಹಿ.ಸ.)
ಆ್ಯಂಕರ್ : ರಾಷ್ಟೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ಭಾರತ ಸರ್ಕಾರದ ಆಯುಷ್ ಮಂತ್ರಾಲಯ, ಬೆಂಗಳೂರಿನ ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಕರ್ನಾಟಕದ ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಚಿಕಿತ್ಸಾ ಇವರ ನೇತೃತ್ವದಲ್ಲಿ ಪ್ರಕೃತಿ ಚಿಕಿತ್ಸೆ ಮಾಹಿತಿ ಮತ್ತು ಚಿಕಿತ್ಸಾ ಶಿಬಿರವು ರಾಯಚೂರು ನಗರದ ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದಲ್ಲಿ ನವೆಂಬರ್ 12ರಂದು ನಡೆಯಿತು.
ಸಂಘದ ಅಧ್ಯಕ್ಷರಾದ ಪತಂಗೆ ಜಯವಂತರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚ ಭೂತಗಳಾದ ವಾಯು, ಅಗ್ನಿ, ಸೂರ್ಯ, ಚಂದ್ರ, ಭೂಮಿ ಮೂಲಕ ಪ್ರಕೃತಿ ಚಿಕಿತ್ಸಾ ಕಾರ್ಯ ಮಾಡುವುದರಿಂದ ರೋಗಿಯು ಧೀರ್ಘಕಾಲೀನ ರೋಗಗಳಿಂದ ಮುಕ್ತಿ ಹೊಂದಿ ಹೊಸ ಚೈತನ್ಯದಿಂದ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತಾವು ಈ ಹಿಂದೆ ಪ್ರಕೃತಿ ಚಿಕಿತ್ಸೆಯನ್ನು ಪಡೆದುಕೊಂಡದ್ದು ಹೆಚ್ಚಿನ ಅನುಕೂಲವಾಗಿದೆ ಎಂದ ಅವರು, ಡಾ.ಕುಮಾರಿ ಸಮೃದ್ದಿ ತಂದೆ ಸುನೀಲ್ ಬೆಂಗಳೂರು ಅವರು ಪೃಕೃತಿ ಚಿಕಿತ್ಸೆಯ ವೈದ್ಯಕೀಯ ಶಿಕ್ಷಣ ಪಡೆದು ಈ ಕಾರ್ಯಗಾರವನ್ನು ರಾಯಚೂರಲ್ಲಿ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಗಾರದಲ್ಲಿ ಸಂಘದ ಎಲ್ಲಾ ನಿರ್ದೇಶಕರು, ಸಿಬ್ಬಂದಿ, ಕಾರ್ಮಿಕರು, ರೈತ ಸದಸ್ಯರು ಹಾಗೂ ಸುತ್ತಲಿನ ಗ್ರಾಮಗಳ ಮತ್ತು ನಗರವಾಸಿಗಳು ರಕ್ತದೊತ್ತಡ, ಸಕ್ಕರೆ ಇನ್ನಿತರ ಕಾಯಿಲೆಗಳ ಬಗ್ಗೆ ಉಚಿತವಾಗಿ ಆರೋಗ್ಯ ತಪಾಸಣೆ ಪ್ರಯೋಜನೆ ಪಡೆದುಕೊಂಡರು.
ಉಜಿರೆಯ ಎಸ್.ಡಿ.ಎಮ್.ಪ್ರಕೃತಿಕ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ವೈದ್ಯಾರಾದ ಡಾ.ಪವನ್ ಕೆ.ಎಸ್., ಡಾ.ಭಾರತ್, ಡಾ.ಮಾಣಿಕ್ಯ, ಡಾ.ಉಮೇಶ್ ಜಾದವ್, ಡಾ.ವೀರನಗೌಡ, ರವಿಶಂಕರ್, ರಮಾ ಪಾಟೀಲ್, ಡಾ.ನವ್ಯ ಹಾಗೂ ಸಂಘದ ಉಪಾಧ್ಯಕ್ಷರಾದ ಶಶಿಧರ ಪಾಟೀಲ್ ನಿರ್ದೇಶಕರಾದ ಮಲ್ಲನಗೌಡ ಪಾಟೀಲ್, ಶರಬಣಗೌಡ, ಶಂಕರರೆಡ್ಡಿ, ಪ್ರಧಾನ ವ್ಯವಸ್ಥಾಪಕರಾದ ಬಂದಯ್ಯಸ್ವಾಮಿ, ಸಹಾಯಕ ವ್ಯವಸ್ಥಾಪಕರಾದ ಜಗದೀಶ್ ಸ್ವಾಮಿ, ಲೇಕಪಾಲರಾದ ನರಸಿಂಹಪ್ಪ ಹಾಗೂ ಇನ್ನೀತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್