
ರಾಯಚೂರು, 12 ನವೆಂಬರ್ (ಹಿ.ಸ.)
ಆ್ಯಂಕರ್ : ಜೆಸ್ಕಾಂ ನಗರ-02ರ ವ್ಯಾಪ್ತಿಯ ಎಪಿಎಮ್ಸಿ 11ಕೆವಿ ಉಪ ಕೇಂದ್ರದಲ್ಲಿ ಹಳೆಯ 11ಕೆವಿ ಸರ್ಕ್ಯೂಟ್ ಬದಲಾವಣೆ ಕಾಮಗಾರಿಯನ್ನು ಬ್ಯಾಂಕ್ 1, 2 ನಲ್ಲಿ ಹಮ್ಮಿಕೊಂಡಿರುವ ಪ್ರಯುಕ್ತ ನವೆಂಬರ್ 14ರ ಬೆಳಿಗ್ಗೆ 09 ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕಾರಿಸುವಂತೆ ಕೋರಲಾಗಿದೆ.
ಅಂದು ಬೆಳಿಗ್ಗೆ 09 ರಿಂದ ನಗರದ ಮಂಚಲಾಪುರ ರಸ್ತೆ, ಟೈಪಾನ್ ರಸ್ತೆಯ ಇಂಡಸ್ಟ್ರೀಯಲ್ ಏರಿಯಾ, ರಿಮ್ಸ್ ಆಸ್ಪತ್ರೆ, ಓಪೆಕ್ ಆಸ್ಪತ್ರೆ, ಎಲ್.ಬಿ.ಎಸ್. ನಗರ, ಪೊಲೀಸ್ ಕಾಲೋನಿ, ಅಲ್ಲಮಪ್ರಭು ಕಾಲೋನಿ, ಗಂಜ್ ಏರಿಯಾ, ಚಂದ್ರಬAಡ ರಸ್ತೆ, ಹುಂಡೆಕರ್ ಕಾಲೋನಿ, ಎನ್‌ಜಿಒ ಕಾಲೋನಿ, ಆಶ್ರಯ ಕಾಲೋನಿ, ಯರಮರಸ್ ಕ್ಯಾಂಪ್, ಪೋತಗಲ್, ಅಮರಾವತಿ, ಯರಮರಸ್ ಕೈಗಾರಿಕಾ ಪ್ರದೇಶ, ನಂದಿನಿ ಹಾಲು ಡೈರಿ, ಸರಕಾರಿ ಎಂಜಿಯಿಯರ್ ಕಾಲೇಜ್, ಎಸ್.ಎಲ್.ಎನ್. ಇಂಜಿನಿಯರಿಂಗ್ ಕಾಲೇಜ್, ಐ.ಐ. ಐಟಿ ಕಾಲೇಜ್, ಯರಮರಸ್ ಕ್ಯಾಂಪ್ ಸೇರಿದಂತೆ ಸುತ್ತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕಿಸುವ0ತೆ ಜೆಸ್ಕಾಂ ನಗರ-2ರ ಕಾರ್ಯ ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್