
ಕೊಪ್ಪಳ, 12 ನವೆಂಬರ್ (ಹಿ.ಸ.)
ಆ್ಯಂಕರ್ : ಕೊಪ್ಪಳ ಜೆಸ್ಕಾಂ ಉಪ ವಿಭಾಗ ವ್ಯಾಪ್ತಿಯ ಎನ್.ಹೆಚ್-50 ಮೆತಗಲ್ ಅಂಡರ್ ಪಾಸ್ ಬಳಿ ವಿದ್ಯುತ್ ಲೈನುಗಳ ದುರಸ್ತಿ ಕಾಮಗಾರಿ ನಡೆಸುತ್ತಿರುವ ಪ್ರಯುಕ್ತ ವಿವಿಧ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ನವೆಂಬರ್ 13 ರಿಂದ ನ. 16ರವರೆಗೆ ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ನ. 13 ರಿಂದ ನ. 16ರವರೆಗೆ ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆ 110 ಕೆ.ವಿ ಚಿಲಕಮುಖ ಸ್ಟೇಷನ್‌ಗೆ ಒಳಪಡುವ ಎಫ್-2 ಮೆತಗಲ್ ಐ.ಪಿ ಫೀಡರ್ ಮತ್ತು ಎಫ್-11 ಜಿನ್ನಾಪೂರ ಎನ್.ಜೆ.ವೈ ಫೀಡರ್‌ಗೆ ಒಳಪಡುವ ಅರಸಿನಕೇರಿ, ಅರಸಿನಕೇರಿ ತಾಂಡ, ವಣಬಳ್ಳಾರಿ ಸೀಮಾ, ಶಿವನತಾಂಡ, ಜಿನ್ನಾಪೂರ ಮತ್ತು ಜಿನ್ನಾಪೂರ ತಾಂಡ 11ಕೆವಿ ಮಾರ್ಗಗಳ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಸಹಕರಿಸಬೇಕು.
ವಿದ್ಯುತ್ ದುರಸ್ತಿ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಬವಿಸಿದ್ದಲ್ಲಿ ಕಂಪನಿಯು ಜವಬ್ದಾರರಾಗಿರುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್