ಕೋಲಾರ ತಾಲ್ಲೂಕು ಮದ್ದೇರಿಯಲ್ಲಿ ಗ್ರಾಮ ಪಂಚಾಯತಿಯ ಕಟ್ಟಡ ಉದ್ಘಾಟನೆ
ಕೋಲಾರ ತಾಲ್ಲೂಕು ಮದ್ದೇರಿಯಲ್ಲಿ ಗ್ರಾಮ ಪಂಚಾಯತಿಯ ಕಟ್ಟಡ ಉದ್ಘಾಟನೆ
ಚಿತ್ರ : ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಮದ್ದೇರಿ ಗ್ರಾಮದಲ್ಲಿ ಬುಧವಾರ ೧೫ ನೆಯ ಹಣಕಾಸು ಯೋಜನೆಯಲ್ಲಿ ಗ್ರಾಮ ಪಂಚಾಯತಿಯ ಮೊದಲ ಮಹಡಿ ಕಟ್ಟಡ ಉದ್ಘಾಟನೆ ಹಾಗೂ ೫೦ ಲಕ್ಷ ವೆಚ್ಚದ ಸಿಸಿ ರಸ್ತೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಭಾಗವಹಿಸಿ ಮಾತನಾಡಿದರು.


ಕೋಲಾರ, ೧೨ ನವಂಬರ್ (ಹಿ.ಸ.) :

ಆ್ಯಂಕರ್ : ಸರ್ಕಾರ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಹಲವು ಅಭಿವೃದ್ಧಿ ಯೋಜನೆ, ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ. ಅಭಿವೃದ್ಧಿಪರ ಯೋಜನೆ ಕಾರ್ಯಕ್ರಮಗಳ ಯಶಸ್ವಿಗೊಳಿಸುವಲ್ಲಿ ಗ್ರಾಮಗಳ ಜನರ ಸಹಕಾರ ಅಗತ್ಯವಾಗಿದೆ ಅದನ್ನು ಬಿಟ್ಟು ವಿನಾಕಾರಣ ರಾಜಕಾರಣ ಮಾಡಬಾರದು ರಾಜಕಾರಣ ಕೇವಲ ಚುನಾವಣೆಗೆ ಸೀಮಿತಗೊಳಿಸಿ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಮದ್ದೇರಿ ಗ್ರಾಮದಲ್ಲಿ ಬುಧವಾರ ೧೫ ನೆಯ ಹಣಕಾಸು ಯೋಜನೆಯಲ್ಲಿ ಗ್ರಾಮ ಪಂಚಾಯತಿಯ ಮೊದಲ ಮಹಡಿ ಕಟ್ಟಡ ಉದ್ಘಾಟನೆ ಹಾಗೂ ೫೦ ಲಕ್ಷ ವೆಚ್ಚದ ಸಿಸಿ ರಸ್ತೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೋಲಾರ ತಾಲೂಕಿನ ಜನತೆಗೆ ಅಭಿವೃದ್ಧಿ ಬಗ್ಗೆ ಕಾಳಜಿಯಿಲ್ಲ ಜಿಲ್ಲೆಯ ಲ್ಲೇ ಅತಿ ಹೆಚ್ಚು ಅನುದಾನ ಕೋಲಾರ ತಾಲೂ ಕಿಗೆ ಸಲ್ಲುತ್ತದೆ ಅಭಿವೃದ್ಧಿ ಮಾಡಲು ಮನೆ ಬಾಗಿಲಿಗೆ ಬಂದು ಕೆಲಸ ಮಾಡಲು ಸಿದ್ದ ಮಾಡ ಬೇಕು ಅನ್ನೋ ಇಚ್ಛಾಶಕ್ತಿ ಮುಖ್ಯವಾಗುತ್ತದೆ ಎಂದರು.

ಕೋಲಾರ ತಾಲೂಕಿನ ವೇಮಗಲ್ ಭಾಗದಲ್ಲಿ ಸಿ ಬೈರೇಗೌಡರನ್ನು ಎಲ್ಲರೂ ನೆನೆಯುತ್ತಾರೆ ಇವತ್ತು ಏನಾದರೂ ಮಾಡಲಿಕ್ಕೆ ಹೋದರೆ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಾರೆ ಯಾರು ಏನೇ ಮಾಡಿದರೂ ಗ್ರಾಮಗಳ ಅಭಿವೃದ್ಧಿಯೇ ಮುಖ್ಯ ಗುರಿಯಾಗಿದೆ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇದ್ದರೂ ಗಮನಕ್ಕೆ ತನ್ನಿ ಬಗೆಹರಿಸುತ್ತೇವೆ ಶಿಕ್ಷಣ ಆರೋಗ್ಯ ಉದ್ಯೋಗ ರೈತರಿಗೆ ಆಧ್ಯತೆ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಗ್ರಾಮ ಒಂಚಾಯಿತಿ ಅಂದರೆ ಸರ್ಕಾರದ ರೀತಿಯಲ್ಲಿ ಕೆಲಸ ಮಾಡುತ್ತದೆ ಮೊದಲು ಗ್ರಾಪಂಗೆ ಮೂಲ ಭೂತ ಸೌಲಭ್ಯಗಳು ಇರಬೇಕು. ವ್ಯವಸ್ಥತಿತವಾಗಿ ಸುಲಭವಾಗಿ ಗ್ರಾಮಗಳ ಅಭಿವೃದ್ದಿಗೆ ಆಧ್ಯತೆ ನೀಡಲು ಸಹಕಾರಿ ಯಾಗುತ್ತದೆ ಎಲ್ಲಾಕಡೆ ಗ್ರಾಮ ಪಂಚಾಯತಿ ಕಟ್ಟಡಗಳು ವ್ಯವಸ್ಥಿತವಾಗಿ ಅಭಿವೃದ್ದಿ ಹೊಂದುತ್ತಿದೆ. ಮದ್ದೇರಿ ಗ್ರಾಮ ಪಂಚಾಯಿತಿ ಕೋಲಾರ ಜಿಲ್ಲೆ ಕಡೆಯ ಪಂಚಾಯಿತಿಯನ್ನಾಗಿ ಮಾಡಿ ಹೋಬಳಿಯಲ್ಲಿ ಸಿಗುವ ಎಲ್ಲಾ ಸಲಭ್ಯಗಳನ್ನು ಕಲ್ಪಿಸಿಲುವ ನಿಟ್ಟಿನಲ್ಲಿ ಮಾಡಿದ್ದಾರೆ ಅದನ್ನು ಉಳಿಸಿಕೊಂಡು ಹೋಗಬೇಕು ಎಂದರು.

ಮುಂದಿನ ದಿನಗಳಲ್ಲಿ ಗ್ರಾಮದ ಪರಿಮಿತಿಯಲ್ಲಿ ಏನಾದರೂ ಸಮಸ್ಯೆಗಳು ಇದ್ದರೂ ಬಗೆ ಹರಿಸಲಾಗುವುದು ಸಿ ಬೈರೇಗೌಡರ ಕಾಲದಲ್ಲಿ ಹಾಗಿದ್ದ ಎಲ್ಲಾ ರಸ್ತೆಗಳು ಇವತ್ತು ಇದ್ದು ನಮ್ಮ ಕಾಂಗ್ರೆಸ್ ಸರ್ಕಾರ ಬಂದ ನಂತರದಲ್ಲಿ ಸುಮಾರು೧೭೦ ಕೋಟಿ ರೂ ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ ವಿರೋಧ ಪಕ್ಷದವರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಮದ್ದೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಬು, ಉಪಾಧ್ಯಕ್ಷೆ ಪ್ರೇಮಮ್ಮ, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ತಾಪಂ ಇಒ ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ವೆಂಕಟರಾಮ್, ಶ್ರೀನಿವಾಸಗೌಡ, ಕನಕಣ್ಣ, ಸತೀಶ್, ವೀರೇಂದ್ರ ಪಾಟೀಲ್, ಜಗನ್, ಪಿಡಿಒ ರೇವಣ್ಣ, ಸೇರಿದಂತೆ ಗ್ರಾಪಂ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಚಿತ್ರ : ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಮದ್ದೇರಿ ಗ್ರಾಮದಲ್ಲಿ ಬುಧವಾರ ೧೫ ನೆಯ ಹಣಕಾಸು ಯೋಜನೆಯಲ್ಲಿ ಗ್ರಾಮ ಪಂಚಾಯತಿಯ ಮೊದಲ ಮಹಡಿ ಕಟ್ಟಡ ಉದ್ಘಾಟನೆ ಹಾಗೂ ೫೦ ಲಕ್ಷ ವೆಚ್ಚದ ಸಿಸಿ ರಸ್ತೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಭಾಗವಹಿಸಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande