
ನವದೆಹಲಿ, 12 ನವೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಭೂತಾನ್‌ನ ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರನ್ನು ರಾಜಧಾನಿ ಥಿಂಪುವಿನಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ನಾಲ್ಕನೇ ರಾಜನಿಗೆ ಅವರ 70ನೇ ಜನ್ಮದಿನದ ಶುಭಾಶಯಗಳನ್ನು ತಿಳಿಸಿ, ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಹಾರೈಸಿದರು.
ಭಾರತ–ಭೂತಾನ್ ಸ್ನೇಹ ಸಂಬಂಧವನ್ನು ಬಲಪಡಿಸುವಲ್ಲಿ ನಾಲ್ಕನೇ ರಾಜನ ನಾಯಕತ್ವ, ಮಾರ್ಗದರ್ಶನ ಮತ್ತು ದೂರದೃಷ್ಟಿಗೆ ಪ್ರಧಾನಿ ಮೋದಿ ಕೃತಜ್ಞತೆ ವ್ಯಕ್ತಪಡಿಸಿದರು. ಇಬ್ಬರು ನಾಯಕರು ಸಭೆಯ ವೇಳೆ ಪರಸ್ಪರ ಸಂಬಂಧಗಳು, ಪ್ರಾದೇಶಿಕ ಸಹಕಾರ ಮತ್ತು ಹಂಚಿಕೆಯ ಆಸಕ್ತಿಯ ವಿಷಯಗಳು ಕುರಿತು ಚರ್ಚಿಸಿದರು.
ಮೋದಿ ಅವರು ಭಾರತ ಮತ್ತು ಭೂತಾನ್ ನಡುವಿನ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯಗಳ ಆಳವನ್ನು ಒತ್ತಿ ಹೇಳಿದ್ದಾರೆ. “ಇವು ಎರಡೂ ರಾಷ್ಟ್ರಗಳನ್ನು ಪರಸ್ಪರ ಹತ್ತಿರ ತರುತ್ತಿವೆ,” ಎಂದು ಅವರು ಅಭಿಪ್ರಾಯಪಟ್ಟರು.
ನಂತರ ಪ್ರಧಾನ ಮಂತ್ರಿ ಮೋದಿ ಅವರು ಭೂತಾನ್‌ನ ನಾಲ್ಕನೇ ರಾಜ ಹಾಗೂ ಪ್ರಧಾನ ಮಂತ್ರಿಯೊಂದಿಗೆ ಥಿಂಪುವಿನ ಚಾಂಗ್ಲಿಮಿಥಾಂಗ್ ಕ್ರೀಡಾಂಗಣದಲ್ಲಿ ನಡೆದ ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದಲ್ಲಿ ಭಾಗವಹಿಸಿದರು. ಈ ಉತ್ಸವವು ಭೂತಾನ್‌ನ ಮುಖ್ಯ ಧಾರ್ಮಿಕ ಗುರು ಜೆ ಖೆನ್ಪೋ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಲಚಕ್ರ ದೀಕ್ಷಾ ಸಮಾರಂಭದ ಭಾಗವಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa