ಜಮ್ಮು ಕಾಶ್ಮೀರ ಪೋಲಿಸರಿಂದ ಹರಿಯಾಣದ ಧಾರ್ಮಿಕ ಮುಖಂಡನ ಬಂಧನ
ಶ್ರೀನಗರ, 12 ನವೆಂಬರ್ (ಹಿ.ಸ.) : ಆ್ಯಂಕರ್ : ಫರಿದಾಬಾದ್‌ನ ವಿಶ್ವವಿದ್ಯಾಲಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈಟ್-ಕಾಲರ್ ಭಯೋತ್ಪಾದನಾ ಮಾಡ್ಯೂಲ್ಗೆ ಸಂಬಂಧಿಸಿದಂತೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ಹರಿಯಾಣದ ಮೇವಾತ್ ಮೂಲದ ಧಾರ್ಮಿಕ ಮುಖಂಡ ಮೌಲ್ವಿ ಇಶ್ತಿಯಾಕ್ ನನ್ನು ಬಂಧಿಸಿದ್ದಾರೆ
ಜಮ್ಮು ಕಾಶ್ಮೀರ ಪೋಲಿಸರಿಂದ ಹರಿಯಾಣದ ಧಾರ್ಮಿಕ ಮುಖಂಡನ ಬಂಧನ


ಶ್ರೀನಗರ, 12 ನವೆಂಬರ್ (ಹಿ.ಸ.) :

ಆ್ಯಂಕರ್ : ಫರಿದಾಬಾದ್‌ನ ವಿಶ್ವವಿದ್ಯಾಲಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈಟ್-ಕಾಲರ್ ಭಯೋತ್ಪಾದನಾ ಮಾಡ್ಯೂಲ್ಗೆ ಸಂಬಂಧಿಸಿದಂತೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ಹರಿಯಾಣದ ಮೇವಾತ್ ಮೂಲದ ಧಾರ್ಮಿಕ ಮುಖಂಡ ಮೌಲ್ವಿ ಇಶ್ತಿಯಾಕ್ ನನ್ನು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಇಶ್ತಿಯಾಕ್ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದ ಆವರಣದಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಶೋಧದ ವೇಳೆ ಪೊಲೀಸರು ಸುಮಾರು 2,500 ಕಿಲೋಗ್ರಾಂ ಅಮೋನಿಯಂ ನೈಟ್ರೇಟ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಸಲ್ಫರ್ ಸೇರಿದಂತೆ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಇದು ಒಂಬತ್ತನೇ ಬಂಧನವಾಗಿದೆ. ಕಳೆದ ವಾರ ಹರಿಯಾಣ ಮತ್ತು ಉತ್ತರ ಪ್ರದೇಶದ ಪೊಲೀಸರು, ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸಹಯೋಗದೊಂದಿಗೆ, ನಿಷೇಧಿತ ಜೈಶ್-ಎ-ಮೊಹಮ್ಮದ್ ಹಾಗೂ ಅನ್ಸರ್ ಘಜ್ವತ್-ಉಲ್-ಹಿಂದ್ ಸಂಘಟನೆಗಳ ವೈಟ್-ಕಾಲರ್ ಜಾಲವನ್ನು ಭೇದಿಸಲು ಅಂತರರಾಜ್ಯ ದಾಳಿ ನಡೆಸಿದ್ದರು.

ತನಿಖಾಧಿಕಾರಿಗಳ ಪ್ರಕಾರ, ಕೆಂಪುಕೋಟೆಯ ಹೊರಗೆ ಸೋಮವಾರ ಸಂಜೆ ಸಂಭವಿಸಿದ ಕಾರು ಸ್ಫೋಟದಲ್ಲಿ ಬಳಸಿದ ಸ್ಫೋಟಕ ವಸ್ತುಗಳನ್ನು ಫರಿದಾಬಾದ್‌ನ ಬಾಡಿಗೆ ಮನೆಯಲ್ಲಿ ಸಂಗ್ರಹಿಸಲಾಗಿತ್ತು. ಆ ಮನೆಯಲ್ಲಿ ಡಾ. ಮುಜಮ್ಮಿಲ್ ಗನೈ ಅಲಿಯಾಸ್ ಮುಸೈಬ್ ಮತ್ತು ಡಾ. ಉಮರ್ ನಬಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande