ಜನಪದ ಸಾಹಿತ್ಯ ನಮ್ಮ ಜೀವನಾಡಿ- ಕರ್ಣಕುಮಾರ್
ಕೊಪ್ಪಳ , 12 ನವೆಂಬರ್ (ಹಿ.ಸ.) ಆ್ಯಂಕರ್ : ಜನಪದ ಸಾಹಿತ್ಯವು ನಮ್ಮ ಜೀವನಾಡಿಯಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್ ಅವರು ಹೇಳಿದ್ದಾರೆ. ಅವರು ಕೊಪ್ಪಳ ತಾಲ್ಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ
ಸಂಸ್ಕೃತಿ


ಸಂಸ್ಕೃತಿ


ಕೊಪ್ಪಳ , 12 ನವೆಂಬರ್ (ಹಿ.ಸ.)

ಆ್ಯಂಕರ್ :

ಜನಪದ ಸಾಹಿತ್ಯವು ನಮ್ಮ ಜೀವನಾಡಿಯಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್ ಅವರು ಹೇಳಿದ್ದಾರೆ.

ಅವರು ಕೊಪ್ಪಳ ತಾಲ್ಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಶ್ರೀ ಕ್ಷೇತ್ರ ಹುಲಿಗಿ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ``ಹಾಡಿರೇ ರಾಗಗಳ ತೂಗಿರೇ ದೀಪಗಳ'' ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಪದ ಸಾಹಿತ್ಯ ಒಂದು ತಲೆಮಾರಿನಿಂದ ಇನ್ನೋಂದು ತಲೆಮಾರಿಗೆ ಮೌಖಿಕವಾಗಿ ಹರಡಿರುವ ಸಾಹಿತ್ಯವಾಗಿದೆ. ಕಲೆ, ಸಂಸ್ಕøತಿ ಇದು ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಸರ್ವರನ್ನು ಒಳಗೊಂಡ ಜೀವನಾಡಿಯಾಗಿದೆ. ಕಲೆ ಮತ್ತು ಸಂಸ್ಕøತಿ ಉಳಿಯುವಲ್ಲಿ ಕಲಾವಿದರ ಹಾಗೂ ಸಾರ್ವಜನಿಕರ ಪಾತ್ರ ಬಹುದೊಡ್ಡದಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹಿಸಬೇಕು. ಸರ್ಕಾರ ಕಲಾವಿದರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಕಲಾವಿತರು ಮತ್ತು ಕಲಾ ತಂಡಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕøತರಾದ ಭೀಮವ್ವ ಶಿಳ್ಳೆಕ್ಯಾತರ್ ಹಾಗೂ ಕರ್ನಾಟಕ ಬಯಲಾಟ ಪ್ರಶಸ್ತಿ ಪುರಸ್ಕøತರಾದ ತಿಮ್ಮಣ್ಣ ಚನ್ನದಾಸರ್ ಅವರು ಉದ್ಘಾಟಿಸಿದರು.

ಹುಲಿಗೆಮ್ಮ ದೇವಿ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಯಂ.ಹೆಚ್ ಪ್ರಕಾಶ್‍ರಾವ್ ಅವರು ಮಾತನಾಡಿ, ಗ್ರಾಮೀಣ ಭಾಗದ ಜನಪದ ಕಲೆ ಈ ನಾಡನ್ನು ಹಿರಿದಾಗಿಸಿದೆ. ಇಂದಿನ ಯುವ ಪಿಳಿಗೆಯಲ್ಲಿ ಜನಪದದ ಅರಿವೇ ಇಲ್ಲ. ಇಂದಿನ ಯುವ ಪಿಳಿಗೆಗೆ ಜನಪದ ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯನ್ನು ತಿಳಿಸಿ, ಅದನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜಿಲ್ಲೆಯ ಹೆಮ್ಮೆಯ ತೊಗಲುಗೊಂಬೆಯಾಟದ ಕಲಾವಿದೆಯಾದ ಪದ್ಮಶ್ರೀ ಪುರಸ್ಕøತೆ ಭೀಮವ್ವ ಶಿಳ್ಳೆಕ್ಯಾತರ್ ರವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತೊಗಲರು ಗೊಂಬೆಯಾಟದ ಪದಗಳು, ಬಯಲಾಟದ ಪದಗಳು ಹಾಗೂ ಮುದುಕವ್ವ ಗಂಜಿಹಾಳ ಸಂಗಡಿಗರಿಂದ ಗೀ-ಗೀ ಪದಗಳು, ಸಣ್ಣಚಿನ್ನಪ್ಪ ಇವರಿಂದ ಜಾನಪದ ಸಂಗೀತ, ಮಂಜುನಾಥ ಕಟ್ಟಿಮನಿ ಸುಗಮ ಸಂಗೀತ, ಸಂಪ್ರದಾಯದ ಪದಗಳನ್ನು ಡಾ. ಬಿ.ಆರ್. ಅಂಬೇಡ್ಕರ್ ಸಾಂಸ್ಕøತಿಕ ಜಾನಪದ ಕಲಾಸಂಘ ಮಂಡಲಗೇರಿ ರವರು ಪ್ರಸ್ತುತ ಪಡಿಸಿದರು. ವಿವಿಧ ಕಲಾವಿದರು ಭಾಗಿಯಾಗಿ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕ ಹನುಮಂತಪ್ಪ ಕುರಿ ಅವರು ನಿರೂಪಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande