ಪತ್ರಕರ್ತರ ಸಂಘದಿಂದ ಕನ್ನಡ ಪರಿಚಾರಕರಿಗೆ ಪ್ರಶಸ್ತಿ
ಪತ್ರಕರ್ತರ ಸಂಘದಿಂದ ಕನ್ನಡ ಪರಿಚಾರಕರಿಗೆ ಪ್ರಶಸ್ತಿ
ಚಿತ್ರ : ಕೋಲಾರ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಸಂಘದಿಂದ ಕನ್ನಡ ಪರಿಚಾರಕರಿಗೆ ಪ್ರಶಸ್ತಿ ನೀಡಲಾಯಿತು.


ಕೋಲಾರ, ೧೨ ನವಂಬರ್ (ಹಿ.ಸ.) :

ಆ್ಯಂಕರ್ : ನಾಡು ನುಡಿಗಾಗಿ ನೆಲ ಜಲಕ್ಕಾಗಿ ತೆರೆ ಮರೆಯಲ್ಲಿ ಹೋರಾಟ ಮಾಡಿದವರನ್ನು ಗುರುತಿಸಿ ಬೆಳಕಿಗೆ ತರುವ ದಿಸೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಳೆದ ೩ ವರ್ಷಗಳಿಂದ ಪರಿಚಾರಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ತಿಳಿಸಿದರು.

ಕೋಲಾರ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಕನ್ನಡ ಪರಿಚಾರಕ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ನಮ್ಮ ಬದುಕು ಕನ್ನಡ, ನಮ್ಮ ವೃತ್ತಿಯು ಕನ್ನಡವಾಗಿದೆ. ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವದ ಬದಲಾಗಿ ವಿನೂನವಾಗಿ ಅಕ್ಟೋಬರ್ ೩೧ ರಂದು ಆಯೋಜಿಸಲಾಗುತ್ತಿದ್ದ ಕಾರ್ಯಕ್ರಮವನ್ನು ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ ಎಂದು ನ,೧೨ಕ್ಕೆ ಈ ಕಾರ್ಯಕ್ರಮವನ್ನು ನಿಗಧಿಪಡಡಿಸಲಾಗಿದೆ. ನಾನು ಅಧಿಕಾರವಧಿಯ ೩ನೇ ವರ್ಷದ ಕಾರ್ಯಕ್ರಮವಾಗಿದೆ ಎಂದರು.

ಇಂದಿನ ಪ್ರಶಸ್ತಿಗಳ ಅಪಮೌಲ್ಯಗಳಾಗಿರುವ ಸಂದರ್ಭದಲ್ಲಿ ನೈಜವಾದ ಕನ್ನಡಿಗರನ್ನು ಗುರುತಿಸಿ ವಿಶೇಷ ರೀತಿಯ ಪರಿಚಾರಕ ಪ್ರಶಸ್ತಿ ಫಲಕ ನೆನಪಿನ ಕಾಣಿಕೆ, ಜೂತೆಗೆ ೫ಸಾವಿರ ರೂ ನಗದು ನೀಡಿ ಸನ್ಮಾನಿಸುವಂತ ಮಾದರಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಹಿಂದೆ ಸುರೇಶ್ ಮತ್ತು ರಮೇಶ್ ಎಂಬುವರಿಗೆ ನೀಡಲಾಗಿತ್ತು, ಕಳೆದ ವರ್ಷ ಸುಲೇಮಾನ್ ಖಾನ್ ಹಾಗೂ ಸಾಹಿತಿ ಡಾ.ಕೆ.ರಾಜ್ ಕುಮಾರ್ ಅವರಿಗೆ ನೀಡಲಾಗಿತ್ತು.

ಈ ಬಾರಿ ಪರಿಮಳ ಕ್ಯಾಸೆಟ್ ಅಂಗಡಿ ಹಾಗೂ ತರಕಾರಿ ಮಂಡಿ ಶ್ರೀನಿವಾಸ್ ಮತ್ತು ಕೆ.ಜಿ.ಎಫ್. ನಗರದ ಪತ್ರಿಕೆಗಳ ವಿತರಕರು ಕನ್ನಡ ಪರ ಹಿರಿಯ ಹೋರಟಗಾರರಾದ ವಿ.ಎಸ್.ಪ್ರಕಾಶ್ ಅವರನ್ನು ಗುರುತಿಸಿ ಪರಿಚರಕ ಪ್ರಶಸ್ತಿಯನ್ನು ವಿತರಿಸಲಾಗುತ್ತಿದೆ. ನ,೧ ರಂದು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ನಾ. ಮಂಜುನಾಥ್ ಅವರಿಗೆ ಭಾಜನರಾಗಿದ್ದಾರೆ ಎಂದು ಹೇಳಿದರು.

ಗೋಕಾಕ್ ವರದಿ, ಸರೋಜಿನಿ ಮಹಿಷಿ ವರದಿ ಜಾರಿಗಾಗಿ. ಕಾವೇರಿ ಮಹಾದಾಯಿ ನೀರಿನ ಹೋರಾಟ ಸೇರಿದಂತೆ ಹಿಂದಿ ಹೇರಿಕೆ ವಿರುದ್ದ ಬೆಳಗಾವಿ ಮರಾಠಿಗರ ಪುಂಡಾಟಿಕೆಗಳ ವಿರುದ್ದ ಹಾಗೂ ಕನ್ನಡ ಚಲನ ಚಿತ್ರಗಳ ಪ್ರದರ್ಶನಗಳು, ಆಡಳಿತ ಭಾಷೆ ಕನ್ನಡ ಜಾರಿಗಾಗಿ, ಜಿಲ್ಲೆಯಲ್ಲಿ ನಡೆದ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಇವರು ಕನ್ನಡಕ್ಕಾಗಿ ಬ್ರಹ್ಮಚಾರಿ ಗಳಾಗಿರುವ ಈ ತ್ರಿಮೂರ್ತಿಗಳು ನಿಜವಾದ ಕನ್ನಡಿಗರಾಗಿದ್ದು ಇವರಿಗೆ ಪತ್ರಕರ್ತರ ಸಂಘ ನೀಡುತ್ತಿರುವ ಪರಿಚಾರಕ ಪ್ರಶಸ್ತಿಯು ಅರ್ಥಪೂರ್ಣ ಎನಿಸಿದೆ ಎಂದು ಅಭಿಪ್ರಾಯ ಪಟ್ಟರು.

ವಿಶೇಷವಾಗಿ ತಮಿಳುಮಯ ಆಗಿದ್ದ ಕೆ.ಜಿ.ಎಫ್.ನಲ್ಲಿ ಕನ್ನಡದ ಬೆಳವಣಿಗೆಗೆ ವಿ.ಎಸ್. ಪ್ರಕಾಶ್ ಕೊಡುಗೆ ಅಪಾರವಾಗಿದೆ. ಕೆ.ಜಿ.ಎಫ್. ಬಸ್ ನಿಲ್ದಾಣಕ್ಕೆ ಕುವೆಂಪು ಹೆಸರು, ಬಿಜಿಎಂಎಲ್ ಕಾಲೋನಿಯಲ್ಲಿ ರಾಜ್ಯೋತ್ಸವ, ಕನ್ನಡ ಸಂಘಗಳು ಸ್ಥಾಪಿಸುವ ಮೂಲಕ ಕನ್ನಡದ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿರುವ ಇವರಿಗೆ ಕನ್ನಡ ಪರಿಚಾರಕ ಪ್ರಶಸ್ತಿ ನೀಡಿರುವುದು, ಇದೇ ರೀತಿ ತರಕಾರಿ ಮಂಡಿ ಶ್ರೀನಿವಾಸ್ ಮತ್ತು ನಾ. ಮಂಜುನಾಥ್ ಅವರುಗಳು ಡಾ.ರಾಜ್ ಕುಮಾರ್ ಅಭಿಮಾನಿಗಳು, ಕನ್ನಡಕ್ಕಾಗಿ ಅನೇಕ ಹೋರಾಟಗಳು ಮಾಡಿರುವ ನೆನಪುಗಳು ದಾಖಲಾರ್ಹವಾಗಿದೆ ಎಂದು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಸದಸ್ಯರಾದ ವಿ.ಮುನಿರಾಜು ಪ್ರಾಸ್ತಾವಿಕ ನುಡಿಗಳನ್ನಾಡಿ, ರಾಜ್ಯದ ಗಡಿ ಭಾಗವಾದ ತಮಿಳುನಾಡಿನ ಅಂಚಿನಲ್ಲಿ ವಿ.ಎಸ್. ಪ್ರಕಾಶ್ ಅವರು ತಮಿಳು ಮಯವಾಗಿದ್ದ

ಕೆ.ಜಿ.ಎಫ್.ನಲ್ಲಿ ಸ್ಥಳೀಯರನ್ನು ಒಲೈಸಿಕೊಂಡು ಕನ್ನಡವನ್ನು ಬೆಳಗಿಸಿದ ಕೀರ್ತಿ ಸಲ್ಲಬೇಕು. ಕನ್ನಡದ ಸಾಹಿತ್ಯ, ಚಲನ ಚಿತ್ರಗಳು, ಸಾಂಸ್ಕೃತಿ ಕಾರ್ಯಕ್ರಮಗಳ ಜೂತೆಗೆ ಕನ್ನಡದ ಶಾಲೆಗಳಿಗೆ ಮಕ್ಕಳ ಸೇರ್ಪಡೆ ಮಾಡುವ ಮೂಲಕ ಪ್ರೆರೇಪಿಸಿ ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಶಕ್ತಿ ತುಂಬಿದ್ದಾರೆ ಅನೇಕ ಬಡ ವಿದ್ಯಾರ್ಥಿಗಳ ಶೈಕ್ಷಣಕ್ಕೆ ಆಸರೆಯಾಗಿದ್ದಾರೆ ಎಂದು ಶ್ಲಾಘಿಸಿದರು.

ಗಂಧದ ಗುಡಿ ಚಲನ ಚಿತ್ರವನ್ನು ನೋಡಿ ಡಾ. ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿ ಕನ್ನಡಕ್ಕಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟಿದ್ದಾರೆ. ಡಾ.ರಾಜ್ ಕುಮಾರ್ ಅವರನ್ನು ಆದರ್ಶವಾಗಿಸಿಕೊಂಡು ನ್ಯಾಯ, ನೀತಿ, ಧರ್ಮಗಳನ್ನು ಪಾಲಿಸುವ ಜೂತೆಗೆ ಕನ್ನಡದ ಪತ್ರಿಕೆಗಳನ್ನು ಕಚೇರಿ ಸೇರಿದಂತೆ ಮನೆ ಮನೆ ತಲುಪಿಸುವ ಮೂಲಕ ಕನ್ನಡ ಮಾಧ್ಯಮದ ಕ್ಷೇತ್ರಕ್ಕೂ ಕೆ.ಜಿ.ಎಫ್ನಲ್ಲಿ ಅಧಾರ ಸ್ಥಂಭವಾಗಿ ದುಡಿಯುತ್ತಿರುವರು ಇವರ ಸಾಧನೆಯು ಕಡಿಮೆಯಲ್ಲ ಎಂದು ಬಣ್ಣಿಸಿದರು.

ಇದೇ ರೀತಿ ಕೋಲಾರದ ಗಲ್ ಪೇಟೆಯ ಟಿ. ಶ್ರೀನಿವಾಸ್ ಮತ್ತು ನಾ. ಮಂಜುನಾಥ್ ಅವರು ಜಿಲ್ಲಾ ಕೇಂದ್ರದಲ್ಲಿ ನಡೆದ ಕನ್ನಡಪರ ಹೋರಾಟಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಲ್ಲಾರಿಗೂ ನಾಡು ನುಡಿ-ಜಲ ನೆಲಗಳ ಬೆಳವಣಿಗೆಗೆ ಪೂರಕವಾಗಿ ಮಾಡಿರುವ ಸಾಧನೆಯು ಇತರರಿಗೆ ಮಾದರಿಯಾಗಿದೆ, ಕೋನಾ ಪ್ರಭಾಕರ್ ಮತ್ತು ನಾ. ಮಂಜುನಾಥ್ ಅವರುಗಳು ಕನ್ನಡ ಹೋರಾಟಗಳಲ್ಲಿ ಜೋಡೆತ್ತುಗಳಂತೆ ಪ್ರತಿ ಹೋರಾಟದಲ್ಲೂ ಮುಂಚೂಣಿಯಲ್ಲಿರುತ್ತಿದ್ದರು ಎಂದು ತಿಳಿಸಿದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಖಜಾಂಚಿ ಎಂ.ವಾಸುದೇವಹೊಳ್ಳ ಅವರು ಕಾರ್ಯಕ್ರಮಕ್ಕೆ ಕನ್ನಡ ಬಾವುಟವನ್ನು ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ತಾವು ಕಳೆದ ೧೯೬೦ರ ದಶಕದಲ್ಲಿ ಕೋಲಾರಕ್ಕೆ ಅಗಮಿಸಿದಾಗ ಶ್ರೀನಿವಾಸ್ , ನಾ.ಮಂಜುನಾಥ್ ಹಾಗೂ ಕೆ.ಜಿ.ಎಫ್. ಪ್ರಕಾಶ್ ಅವರ ಒಡನಾಟವನ್ನು ಮೆಲುಕು ಹಾಕಿದ ಅವರು ಪತ್ರಕರ್ತರ ಸಂಘವು ನೀಡುತ್ತಿರುವ ಪರಿಚಾರಕ ಪ್ರಶಸ್ತಿಯು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಕೆ.ಜಿ.ಎಫ್ನ ಎನ್.ಆರ್. ಪುರೋಷೋತ್ತಮ್ ಅವರು ವಿ.ಎಸ್. ಪ್ರಕಾಶ್ ಅವರ ಕಿರು ಪರಿಚಯಿಸಿದರು. ಕೋ.ನಾ. ಪ್ರಭಾಕರ್ ಅವರು ನಾ. ಮಂಜುನಾಥ್ ಹಾಗೂ ಮಾಮಿ ಪ್ರಕಾಶ್ ಅವರು ಶ್ರೀನಿವಾಸ್ ಅವರ ಕಿರು ಪರಿಚಯಿಸಿದರು. ನಂತರ ಪ್ರಶಸ್ತಿ ಪುರಸ್ಕೃತರಾದ ತ್ರಿಮೂರ್ತಿಗಳು ತಮ್ಮ ಹೋರಾಟದ ಸಾಧನೆಗಳನ್ನು ಸಭೆಯಲ್ಲಿ ಹಂಚಿಕೊಂಡರು.

ಚಿತ್ರ : ಕೋಲಾರ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಸಂಘದಿಂದ ಕನ್ನಡ ಪರಿಚಾರಕರಿಗೆ ಪ್ರಶಸ್ತಿ ನೀಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande