
ರಾಯಚೂರು, 12 ನವೆಂಬರ್ (ಹಿ.ಸ.)
ಆ್ಯಂಕರ್ :ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‍ಒ) ವತಿಯಿಂದ ಉದ್ಯೋಗಿಗಳ ನೋಂದಣಿ ಅಭಿಯಾನ-2025 ಪ್ರಾರಂಭಿಸಲಾಗಿದ್ದು, ನೌಕರರು ಸ್ವಯಂ ಪ್ರೇರಿತವಾಗಿ ನೋಂದಾಯಿಸಲು ಉದ್ಯೋಗದಾತರಿಗೆ ಅವಕಾಶ ನೀಡಲಾಗಿದೆ ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆಯ ರಾಯಚೂರಿನ ಪ್ರಾದೇಶಿಕ ಕಚೇರಿಯ ಆಯುಕ್ತರು ತಿಳಿಸಿದ್ದಾರೆ.
ಈ ಅಭಿಯಾನದ ಉದ್ದೇಶವು 1ನೇ ಜುಲೈ 2017 ರಿಂದ 2025ರ ಅಕ್ಟೋಬರ್ 31ರವರೆಗೆ ನೌಕರರ ಭವಿಷ್ಯ ನಿಧಿ ಹಾಗೂ ಇತರ ವಿಧೇಯ ಕಾಯ್ದೆ, 1952 ಅಡಿಯಲ್ಲಿ ನೋಂದಣಿಯಾಗದ ನೌಕರರು ಸ್ವಯಂ ಪ್ರೇರಿತವಾಗಿ ನೋಂದಾಯಿಸಲು ಉದ್ಯೋಗದಾತರಿಗೆ 2026ರ ಏಪ್ರಿಲ್ 30ರವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ
ಈ ಅಭಿಯಾನದ ಉದ್ದೇಶವು ಎಲ್ಲಾ ಅರ್ಹ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ವಿಸ್ತರಿಸುವುದು ಮತ್ತು ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ತಮ್ಮ ನೌಕರರ ಸದಸ್ಯತ್ವವನ್ನು ನಿಯಮಿತಗೊಳಿಸಲು ಪ್ರೋತ್ಸಾಹಿಸುವುದಾಗಿದೆ.
ಈ ಯೋಜನೆಯಡಿ, ಉದ್ಯೋಗದಾತರು ನಿಗದಿತ ಅವಧಿಯೊಳಗೆ ನೋಂದಾಯಿಸದ ನೌಕರರನ್ನು ಬಹಿರಂಗಪಡಿಸಿ ಸಂಬಂಧಿತ ಭವಿಷ್ಯ ನಿಧಿ ಕೊಡುಗೆಗಳನ್ನು ಪಾವತಿಸಬಹುದು ಅಭಿಯಾನದ ಸಮಯದಲ್ಲಿ ಹಾನಿ ಮತ್ತು ದಂಡದ ಮೇಲಿನ ಏಕಕಾಲಿನ ಸಡಿಲಿಕೆ ನೀಡಲಾಗುತ್ತದೆ. ಇದರಿಂದ ಸರಳ ಹಾಗೂ ಪಾರದರ್ಶಕ ನೋಂದಣಿ ಪ್ರಕ್ರಿಯೆ ಖಚಿತವಾಗುತ್ತದೆ.
ಈ ಉಪಕ್ರಮದ ಮೂಲಕ ಇಪಿಎಫ್‍ಒ ಎಲ್ಲ ಕಾರ್ಮಿಕರಿಗೂ ವಿಶ್ವ ವ್ಯಾಪಕ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಒದಗಿಸುವುದು ಹಾಗೂ ಅವರ ಆರ್ಥಿಕ ಮತ್ತು ಸಾಮಾಜಿಕ ಕಲ್ಯಾಣವನ್ನು ಖಾತ್ರಿಪಡಿಸುವ ಸರ್ಕಾರದ ದೃಷ್ಟಿಕೋಣವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದು, ಎಲ್ಲಾ ಸಂಸ್ಥೆಗಳಿಗೂ ಈ ಅವಕಾಶವನ್ನು ಉಪಯೋಗಿಸಿಕೊಂಡು ನಿಗದಿತ ಅವಧಿಯೊಳಗೆ ತಮ್ಮ ನೌಕರರನ್ನು ನೋಂದಾಯಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಗಳು ಮತ್ತು ಸದಸ್ಯರು www.epfindia.gov.in ವೆಬ್‍ಸೈಟ್‍ಗೆ ಭೇಟಿ ನೀಡಬಹುದು ಅಥವಾ ಹತ್ತಿರದ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆಯ ರಾಯಚೂರಿನ ಪ್ರಾದೇಶಿಕ ಕಚೇರಿಯ ಆಯುಕ್ತರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್