ಮಕ್ಕಳಿಗೆ ಉಸಿರಾಟದ ತೊಂದರೆ ಕಾಣಿಸಿದಲ್ಲಿ ನಿರ್ಲಕ್ಷಿಸಬೇಡಿ: ಡಾ.ಸುರೇಂದ್ರಬಾಬು
ರಾಯಚೂರು , 12 ನವೆಂಬರ್ (ಹಿ.ಸ.) ಆ್ಯಂಕರ್ : ವಾತಾವರಣದ ಏರುಪೇರಿನಿಂದ ನ್ಯುಮೋನಿಯಾ ಇಡಿ ವಿಶ್ವವನ್ನೇ ಕಾಡುತ್ತಿರುವ ಸಾಂಕ್ರಾಮಿಕವಾಗಿದ್ದು, ಅದರಲ್ಲೂ 5 ವರ್ಷದೊಳಗಿನ ಮಕ್ಕಳಿಗೆ ಎಚ್ಚರಿಕೆ ವಹಿಸದಿದ್ದರೆ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ. ಈ ದಿಶೆಯಲ್ಲಿ, ನಿರ್ಲಕ್ಷ್ಯ ವಹಿಸದೇ ವೈದ್ಯರ ಬಳಿ ಪರ
ಮಕ್ಕಳಿಗೆ ಉಸಿರಾಟದ ತೊಂದರೆ ಕಾಣಿಸಿದಲ್ಲಿ  ನಿರ್ಲಕ್ಷಿಸಬೇಡಿ: ಡಾ.ಸುರೇಂದ್ರಬಾಬು


ಮಕ್ಕಳಿಗೆ ಉಸಿರಾಟದ ತೊಂದರೆ ಕಾಣಿಸಿದಲ್ಲಿ  ನಿರ್ಲಕ್ಷಿಸಬೇಡಿ: ಡಾ.ಸುರೇಂದ್ರಬಾಬು


ಮಕ್ಕಳಿಗೆ ಉಸಿರಾಟದ ತೊಂದರೆ ಕಾಣಿಸಿದಲ್ಲಿ  ನಿರ್ಲಕ್ಷಿಸಬೇಡಿ: ಡಾ.ಸುರೇಂದ್ರಬಾಬು


ರಾಯಚೂರು , 12 ನವೆಂಬರ್ (ಹಿ.ಸ.)

ಆ್ಯಂಕರ್ : ವಾತಾವರಣದ ಏರುಪೇರಿನಿಂದ ನ್ಯುಮೋನಿಯಾ ಇಡಿ ವಿಶ್ವವನ್ನೇ ಕಾಡುತ್ತಿರುವ ಸಾಂಕ್ರಾಮಿಕವಾಗಿದ್ದು, ಅದರಲ್ಲೂ 5 ವರ್ಷದೊಳಗಿನ ಮಕ್ಕಳಿಗೆ ಎಚ್ಚರಿಕೆ ವಹಿಸದಿದ್ದರೆ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ. ಈ ದಿಶೆಯಲ್ಲಿ, ನಿರ್ಲಕ್ಷ್ಯ ವಹಿಸದೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿ ಅಗತ್ಯವಿದ್ದಲ್ಲಿ ಸೂಕ್ತ ಚಿಕಿತ್ಸೆ ಒದಗಿಸುವ ಮೂಲಕ ಮಕ್ಕಳ ಸುಂದರ ಭವಿಷ್ಯಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್‍ಸಿಹೆಚ್ ವಿಭಾಗ, ಅವರ ಆಶ್ರಯದಲ್ಲಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವೆಂಬರ್ 12ರಂದು ಹಮ್ಮಿಕೊಂಡಿದ್ದ ವಿಶ್ವ ನ್ಯೂಮೋನಿಯಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನ್ಯುಮೋನಿಯಾ ಜಾಗೃತಿ ದಿನವನ್ನು ಮೊದಲ ಬಾರಿಗೆ 2009ರಲ್ಲಿ ಆಚರಿಸಲಾಯಿತು. ತೀವ್ರ ಉಸಿರಾಟದ ಸಮಸ್ಯೆಯ ಕಾರಣಗಳಿಂದ ಮಕ್ಕಳ ರಕ್ಷಣೆಗಾಗಿ ಜಾಗೃತಿ ನೀಡಲಾಗುತ್ತಿದ್ದು, ವಾಯುಮಾಲಿನ್ಯ ಹಾಗೂ ಧೂಮಪಾನ, ಕೊಳಚೆ ಪ್ರದೇಶಗಳು, ಅಡುಗೆಗೆ ಮಾಲಿನ್ಯಕಾರಕ ಇಂಧನ ಬಳಕೆ, ಅತಿಯಾದ ವಾಹನಗಳ ಹೊಗೆ ಇವು ನ್ಯುಮೋನಿಯಾ ಉಂಟಾಗಲು ಹೆಚ್ಚಿನ ಕಾರಣವಾಗುವವು. ಮುಖ್ಯವಾಗಿ ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಉಸಿರಾಟದ ಸಮಸ್ಯೆ, ಗಾಳಿಯ ಚೀಲಗಳ ಅಂಗಾಂಶ ಉರಿಯೂತದಿಂದ ಕೂಡಿದ್ದು, ದ್ರವ ಅಥವಾ ಕೀವುಗಳಿಂದ ತುಂಬಿರುತ್ತದೆ. ಇದಲ್ಲದೆ ಬ್ಯಾಕ್ಟಿರಿಯಾ, ವೈರಾಣು ಅಥವಾ ಶಿಲೀಂಧ್ರಗಳು ಸಹ ಇದಕ್ಕೆ ಕಾರಣವಾಗಬಹುದು. ಆದರೆ, ಇದು ತಡೆಗಟ್ಟಬಹುದಾದ ರೋಗವಾಗಿದ್ದು, ಲಸಿಕೆ, ಆರೋಗ್ಯ ಶಿಕ್ಷಣ ಮತ್ತು ಸಮುದಾಯ ಆರೋಗ್ಯ ಶಿಬಿರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕೆಮ್ಮಿದಾಗ ಹಸಿರು, ಹಳದಿ ಅಥವಾ ರಕ್ತಸಿಕ್ತ ಲೋಳೆ ಕಾಣಿಸಿಕೊಳ್ಳುವುದು, ತೀವ್ರ ಜ್ವರ ಮತ್ತು ಶೀತ., ಓಡಾಟ, ಮೆಟ್ಟಿಲು ಹತ್ತುವಾಗ, ಕೆಲಸ ಮಾಡುವಾಗ ಉಸಿರಾಟದ ತೊಂದರೆ., ಕೆಮ್ಮುವಾಗ, ಆಳವಾದ ಉಸಿರಾಟದ ವೇಳೆ ಎದೆ ನೋವು ಕಾಣಿಸುವುದು., ನೀಶಕ್ತಿ ಅಥವಾ ದಣಿದ ಭಾವನೆ ಇವು ನ್ಯೂಮೋನಿಯಾ ಲಕ್ಷಣಗಳಾಗಿವೆ. ನ್ಯುಮೋನಿಯಾ ರೋಗಿಗಳಲ್ಲಿ ಮಾನಸಿಕ ಅರಿವಿನಲ್ಲಿ ಬದಲಾವಣೆ ಉಂಟಾಗಿ ಗೊಂದಲಕ್ಕೆ ಒಳಗಾಗಬಹುದು ಅಥವಾ ಏಕಾಗ್ರತೆ ಸಮಸ್ಯೆ ಕಾಣಿಸಬಹುದು ಎಂದು ಅವರು ತಿಳಿಸಿದರು.

ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ನಂದಿತಾ ಎಮ್ ಎನ್ ಮಾತನಾಡಿ, ‘ಪ್ರತಿ ಉಸಿರನ್ನು ರಕ್ಷಿಸಿ ಮತ್ತು ಪ್ರತಿ ಜೀವವನ್ನು ಉಳಿಸಿ’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ನ್ಯುಮೋನಿಯಾ ದಿನ ಆಚರಿಸಲಾಗುತ್ತಿದ್ದು, ನ್ಯೂಮೋನಿಯಾವು ಸರಿಯಾದ ಲಸಿಕೆ, ನೈರ್ಮಲ್ಯ, ಕಾಪಾಡುವಿಕೆ ಅಗತ್ಯವಾಗಿದೆ. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಪ್ರತಿ ಗುರುವಾರ ನ್ಯುಮೋನಿಯಾಗೆ ಕಾರಣವಾಗುವ ನ್ಯುಮೋಕಾಕಸ್, ಹಬ್ ಮತ್ತು ಇನ್ಪ್ಲೂಯೇಂಜಾದಂತಹ ಬ್ಯಾಕ್ಟಿರಿಯಾ ವಿರುದ್ದದ ಲಸಿಕೆಗಳನ್ನು ವಯಸ್ಸಿಗನುಸಾರ ತಪ್ಪದೆ ಹಾಕಿಸಲು ತಿಳಿಸಿದರು. ಪ್ರಸ್ತುತ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ಮಾತ್ರವಲ್ಲದೆ, ಮಕ್ಕಳ ತಜ್ಞರು ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡುತ್ತಿದ್ದು ಇದರ ಸದುಪಯೋಗಕ್ಕೆ ವಿನಂತಿಸಿದರು.

ಭಿತ್ತಿಪತ್ರ ಬಿಡುಗಡೆ: ಇದೆ ಸಂದರ್ಭದಲ್ಲಿ ನ್ಯೂಮೋನಿಯಾ ಜಾಗೃತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಯಿ ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಜ್ವಲಕುಮಾರ, ಸ್ತ್ರೀರೋಗ ತಜ್ಞೆ ಡಾ.ಶಾಲಿನಿ, ರೆಡಿಯಾಲಾಜಿಸ್ಟ್ ಡಾ.ಭುವನೇಶ್ವರಿ, ಮಕ್ಕಳ ತಜ್ಞರಾದ ಇಮ್ರಾನ್ ಪರ್ವೇಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಹಿರಿಯ ಶೂಶ್ರೂಷಣಾಧಿಕಾರಿ, ಸಲೋಮಿ, ಜಿಲ್ಲಾ ಫ್ಲೂರೋಸಿಸ್ ಸಲಹೆಗಾರ ಗುರುಪ್ರಸಾದ್, ಬಿಹೆಎಚ್‍ಇಓ ಸರೋಜಾ ಕೆ, ಎಮ್.ಟಿ.ಎಸ್ ಸಂಧ್ಯಾ, ಆರ್‍ಕೆಎಸ್‍ಕೆ ಸಲಹೆಗಾರರು ಸಿದ್ದಮ್ಮ, ಅರುಣ್ ಕುಲಕರ್ಣಿ ಸೇರಿದಂತೆ ಸಿಬ್ಬಂದಿ ಮತ್ತು ತಾಯಂದಿರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande