ಕಾಲುವೆಯಲ್ಲಿ ಬಿದ್ದ ಮೂವರಲ್ಲಿ ಒಬ್ಬನ ಶವ ಪತ್ತೆ
ವಿಜಯಪುರ, 12 ನವೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದ ಬಳಿ ಕಾಲುವೆಯಲ್ಲಿ ಬಿದ್ದ ಮೂವರಲ್ಲಿ, ಬುಧವಾರದಂದು ಸಂತೋಷ ಕೊಣ್ಣೂರು (16) ಎಂಬ ಯುವಕನ ಶವ ಪತ್ತೆಯಾಗಿದೆ. ಮಂಗಳವಾರ ಬಸಮ್ಮ ಕೊಣ್ಣೂರ (21), ಸಂತೋಷ ಕೊಣ್ಣೂರು (16) ಹಾಗೂ ರವಿ ಕೊಣ್ಣೂರು (
ಕಾಲುವೆ


ವಿಜಯಪುರ, 12 ನವೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದ ಬಳಿ ಕಾಲುವೆಯಲ್ಲಿ ಬಿದ್ದ ಮೂವರಲ್ಲಿ, ಬುಧವಾರದಂದು ಸಂತೋಷ ಕೊಣ್ಣೂರು (16) ಎಂಬ ಯುವಕನ ಶವ ಪತ್ತೆಯಾಗಿದೆ.

ಮಂಗಳವಾರ ಬಸಮ್ಮ ಕೊಣ್ಣೂರ (21), ಸಂತೋಷ ಕೊಣ್ಣೂರು (16) ಹಾಗೂ ರವಿ ಕೊಣ್ಣೂರು (15) ಎಂಬ ಒಂದೇ ಕುಟುಂಬದ ಮೂವರು ಕಾಲುವೆ ನೀರಿನಲ್ಲಿ ನಾಪತ್ತೆಯಾಗಿದ್ದರು.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿ ಸಂತೋಷ ಕೊಣ್ಣೂರ ಶವವನ್ನು ಪತ್ತೆ ಮಾಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande