ಅರೋಲಿ ಹುಲಿಗೆಮ್ಮದೇವಿ ದೇವಸ್ಥಾನ : ಪ್ರಧಾನ ಅರ್ಚಕರ ನೇಮಕ್ಕೆ ಅರ್ಜಿ ಆಹ್ವಾನ
ಮಾನ್ವಿ, 12 ನವೆಂಬರ್ (ಹಿ.ಸ.) ಆ್ಯಂಕರ್ : ಮಾನ್ವಿ ತಾಲ್ಲೂಕಿನ ಅರೋಲಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಧಾನ ಅರ್ಚಕರನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿಗಳು ಹಾಗೂ ಮಾನ್ವಿ ತಹಸೀಲ್ದಾರರು ತಿಳಿಸಿದ್ದಾರೆ. ಪ್ರಧಾನ ಅರ್ಚಕರ ನೇಮಕಕ್ಕೆ ಈ ಹಿಂದೆ
ಅರೋಲಿ ಹುಲಿಗೆಮ್ಮದೇವಿ ದೇವಸ್ಥಾನ : ಪ್ರಧಾನ ಅರ್ಚಕರ ನೇಮಕ್ಕೆ ಅರ್ಜಿ ಆಹ್ವಾನ


ಮಾನ್ವಿ, 12 ನವೆಂಬರ್ (ಹಿ.ಸ.)

ಆ್ಯಂಕರ್ : ಮಾನ್ವಿ ತಾಲ್ಲೂಕಿನ ಅರೋಲಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಧಾನ ಅರ್ಚಕರನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿಗಳು ಹಾಗೂ ಮಾನ್ವಿ ತಹಸೀಲ್ದಾರರು ತಿಳಿಸಿದ್ದಾರೆ.

ಪ್ರಧಾನ ಅರ್ಚಕರ ನೇಮಕಕ್ಕೆ ಈ ಹಿಂದೆ ಅರ್ಜಿ ಆಹ್ವಾನಿಸಲಾಗಿತ್ತು. ಉದಯಕುಮಾರ ಪೂಜಾರಿ ತಂದೆ ಮಲ್ಲಿಕಾರ್ಜುನ್ ಪೂಜಾರಿ ಸಾ.ಅರೋಲಿ ಮತ್ತು ರಾಜು ಪೂಜಾರಿ ತಂದೆ ಹುಲಿಗೆಪ್ಪ ಪೂಜಾರಿ ಸಾ. ಅರೋಲಿ ಹಾಗೂ ಇನ್ನೀತರರ ಅರ್ಜಿಗಳನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿಗಳ ಕಾಯ್ದೆ 1997ರನ್ವಯ ಸಕ್ಷೆನ್ 17ರ ಪ್ರಕಾರ ತಿರಸ್ಕರಿಸಿ ಆದೇಶ ಹೊರಡಿಸಿದ್ದು, ಆದ್ದರಿಂದ ಪುನಃ ಅರೋಲಿ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಧಾನ ಅರ್ಚಕರನ್ನು ನೇಮಕಕ್ಕೆ ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಆಸಕ್ತರು ಡಿಸೆಂಬರ್ 01ರ ಮಧ್ಯಾಹ್ನ 03 ಗಂಟೆಯೊಳಗಾಗಿ ತಹಶೀಲ್ದಾರ ಕಾರ್ಯಲಯ ಮಾನ್ವಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ದಾಖಲೆಗಳು: ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯಿ ದತ್ತಿ ಇಲಾಖೆ ಬೆಂಗಳೂರು ಇವರಿಂದ ಪಡೆದ ತರಬೇತಿ ಪ್ರಮಾಣ ಪತ್ರ, ಕುಟುಂಬ ವಂಶವಳಿ ಪ್ರಮಾಣ ಪತ್ರ, 1965 ರಿಂದ ಇಲ್ಲಿಯವರೆಗಿನ ಇನಾಂ ಪಹಣಿ, ಮೊಟೇಷನ್ ಪ್ರತಿ., ವಿದ್ಯಾಭ್ಯಾಸದ ಪ್ರಮಾಣ ಪತ್ರಗಳ ದೃಢೀಕೃತ ಪ್ರತಿಗಳನ್ನು ಸಲ್ಲಿಸಬೇಕು ಎಂದು ದೇವಸ್ಥಾನ ಆಡಳಿತಾಧಿಕಾರಿಗಳು ಹಾಗೂ ಮಾನ್ವಿ ತಹಶೀಲ್ದಾರರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande